ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಜಮೀನು ವಿಚಾರವಾಗಿ ಸಲಹೆ ನೀಡಿದ್ದ ಹಿನ್ನೆಲೆ : ಆರ್ ಟಿಐ ಕಾರ್ಯಕರ್ತನ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ...!

ದಾವಣಗೆರೆ: ಆರ್ ಟಿ ಐ ಕಾರ್ಯಕರ್ತ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಮನೆಗೆ ನುಗ್ಗಿ ಅದೇ ಗ್ರಾಮದ ಒಂಭತ್ತು ಮಂದಿ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ. ಪ್ರಸನ್ನ ಕುಮಾರ್ ಎಂಬ ಆರ್ ಟಿ ಐ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಈತ ಆಮ್‌ಆದ್ಮಿ ಪಕ್ಷದ ಮುಖಂಡನೂ ಹೌದು.

ಜಮೀನು ವಿಚಾರವಾಗಿ ಸಲಹೆ ನೀಡಿದ್ದ ಹಿನ್ನೆಲೆ ಪ್ರಸನ್ನ ಕುಮಾರ್ ಮೇಲೆ ಹಲ್ಲೆ ನಡೆಸಲಾಗಿದ್ದು, ಗ್ರಾಮದ ವಿಜಯ ಕುಮಾರ್ , ಮಂಜುನಾಥ್, ಸಿದ್ದಪ್ಪ ಸೇರಿದಂತೆ ಹಲವರ ಮೇಲೆ ದೂರು ನೀಡಲಾಗಿದೆ.

ಮನೆಗೆ ನುಗ್ಗಿ ಹೊರಗೆಳೆದು ಮನಬಂದಂತೆ ಪ್ರಸನ್ನಕುಮಾರ್ ಮೇಲೆ ಹಲ್ಲೆ ನಡೆಸಲಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮಗೆ ಸೂಕ್ತ ಭದ್ರತೆ ನೀಡಬೇಕೆಂದು ಪುಷ್ಪಾ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.

Edited By :
PublicNext

PublicNext

08/08/2022 04:30 pm

Cinque Terre

42.68 K

Cinque Terre

1

ಸಂಬಂಧಿತ ಸುದ್ದಿ