ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಗಳ್ಳರ ಹೆಡಮುರಿ ಕಟ್ಟಿ...ಗೋಕಾಕ ಪೊಲೀಸರಿಗೆ ಎಸ್ಪಿ ಖಡಕ್ ಅದೇಶ

ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್

ಗೋಕಾಕ : ಮನೆಗಳ್ಳತನದಂತಹ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಅಶಕ್ತಗೊಂಡಿರುವ ಗೋಕಾಕ ಪೊಲೀಸರಿಗೆ ಬೂಸ್ಟರ್ ಡೋಜ್ ಕೊಡಲು ಡಾಕ್ಟರೊಬ್ಬರು ಸಜ್ಜಾಗಿದ್ದಾರೆ.

ಅರೆರೆ...ಅದ್ಯಾವ ಡಾಕ್ಟರ್ ಅಂತೀರಾ? ಅವರು ಬೇರೆ ಯಾರೂ ಅಲ್ಲ ಬೆಳಗಾವಿ ಜಿಲ್ಲಾ ನೂತನ ಎಸ್ಪಿ ಡಾ. ಸಂಜೀವ್ ಪಾಟೀಲ್.

ನಗರದ ಪೊಲೀಸರ ಉದಾಸೀನತೆಯೋ ಉದಾರತೆಯೋ ಅಂತೂ ಮನೆಗಳ್ಳರು ಹಾಗೂ ಸರಗಳ್ಳರಿಗೆ ಗೋಕಾಕ್ ಸ್ವರ್ಗವಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ , ಪೊಲೀಸರ ನಿಷ್ಕ್ರಿಯತೆ ಬಗ್ಗೆ ಇಂದೇ ವರದಿಯೊಂದನ್ನು ಬಿತ್ತರಿಸಿತ್ತು. ಈ ಮಾಹಿತಿ ದೊರೆಯುತ್ತಲೆ ಎಸ್ಪಿ ಅವರು ಅಲ್ಲಿಯ ಪೊಲೀಸರ ಬೆಂಡೆತ್ತಿದ್ದಾರೆ ಎನ್ನಲಾಗುತ್ತಿದೆ.

ಆ ವರದಿ ಸಾಕಷ್ಟು ಸುದ್ದಿ ಮಾಡಿತ್ತು. ಈ ವಿಷಯ ಗಮನಕ್ಕೆ ಬರುತ್ತಲೆ ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದ ಎಸ್ಪಿ ಸಂಜೀವ್ ಪಾಟೀಲ್ ಗೋಕಾಕ್ ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಅದರಲ್ಲೂ ಗೋಕಾಕ ಪೊಲೀಸರು ಕಳ್ಳತನ ಪ್ರಕರಣಗಳನ್ನು ನಿರ್ವಹಿಸುತ್ತಿರುವ ಬಗ್ಗೆ ಮಾಧ್ಯಮದ ವರದಿಗಾರರು ಎಸ್ಪಿ ಅವರ ಗಮನಕ್ಕೆ ತಂದಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯಲ್ಲಿ ಇತ್ತೀಚೆಗೆ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ವಿಶೇಷವಾಗಿ ಗೋಕಾಕ ಪಟ್ಟಣದಲ್ಲಿ ಮನೆಮಾಲಿಕರು ಇರುವಾಗಲೇ ಬಿಂದಾಸ್ ಆಗಿ ದೋಚಿ ಕಳ್ಳರು ಪರಾರಿಯಾಗುತ್ತಿದ್ದಾರೆ. ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡುವ ಮಹಿಳೆಯರ ಮಾಂಗಲ್ಯ, ಚಿನ್ನದ ಸರ ಎಗರಿಸುವುದು ಮಾಮೂಲಾಗಿದೆ.

ಕಾರಣ ಇಷ್ಟೇ.... ಪೊಲೀಸರ ಉದಾಸೀನತೆ ಹಾಗೂ ಕಳ್ಳತನಕ್ಕೊಳಗಾದ ಮನೆ ಮಾಲಿಕರ ದಾರಿ ತಪ್ಪಿಸುತ್ತಿರುವಾಗ ಕಳ್ಳರಿಗೆ ಸ್ವರ್ಗವಾಗದೆ ಇರಲು ಸಾಧ್ಯವೆ? ಕಳ್ಳತನ ಪ್ರಕರಣ ದಾಖಲಿಸುವ ಬದಲು ಒಂದು ವೇಳೆ ಕಳ್ಳತನದ ವಸ್ತುಗಳು ಸಿಕ್ಕರೂ ನೀವು ಕೋರ್ಟು ಕಚೇರಿ ಅಲೆಯಬೇಕಾಗುತ್ತೆ, ಕಂಪ್ಲೆಂಟ್ ಕೊಟ್ಟು ಕಿರಿ ಕಿರಿ ಮಾಡಿಕೊಳ್ಳಬೇಡಿ. ಸಿಕ್ಕರೆ ನಾವೇ ತಂದು ಮುಟ್ಟಿಸುತ್ತೇವೆ ಎಂಬ ಬುದ್ಧಿ ಮಾತು ಹೇಳಿ ಸಾರ್ವಜನಿಕರನ್ನು ಕಳಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.

ಕಳೆದ ಭಾನುವಾರ ಗೋಕಾಕ ನಗರದ ಮೂರು ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರಂತೆ. ಈಗ ಈ ಪ್ರಕರಣಗಳು ಎಸ್ಟಿ ಅವರ ಗಮನಕ್ಕೆ ಬರುತ್ತಲೆ ಎಲ್ಲರನ್ನು ಕರೆಸಿ ದೂರು ದಾಖಲಿಸುವ ಪ್ರಕ್ರಿಯೆ ಅರಂಭವಾಗಿದೆಯಂತೆ.

ಪ್ರಕರಣ ದಾಖಲಾಗಿದ್ದರೂ ಕೆಲವು ಪ್ರಕರಣಗಳ ಮಾಹಿತಿಯನ್ನು ಮಾಧ್ಯಮಗಳಿಂದ ರಹಸ್ಯವಾಗಿಡುತ್ತಿರುವುದು ಸಾರ್ವಜನಿಕರ ಸಂಶಗಳಿಗೆ ಕಾರಣವಾಗಿದೆ. ಈ ವಿಷಯವೂ ಎಸ್ಪಿ ಅವರ ಗಮನಕ್ಕೆ ಬಂದಿದ್ದು, ಇತ್ತೀಚಿನ ಕಳ್ಳತನ ಪ್ರಕರಣಗಳ ಮಾಹಿತಿಯನ್ನು ವಾಟ್ಸ್ ಪ್ ಮೂಲಕ ಕಳಿಸುವಂತೆ ಎಸ್ಪಿ ಅವರು ಸಂಬಂಧಪಟ್ಟವರಿಗೆ ಸೂಚಿಸಿರುವುದು ಇದಕ್ಕೆ ಸಾಕ್ಷಿ.

ತಾಲೂಕಿನಲ್ಲಿ ರಾಜಕಾರಣಿಗಳ ಹಸ್ತಕ್ಷೇಪವು ಪೊಲೀಸರ ನೈತಿಕ ಬಲವನ್ನು ಕುಗ್ಗಿಸಿರಬಹುದು. ಏಕೆಂದರೆ ಇತ್ತೀಚೆಗೆ ಒಬ್ಬ ಪ್ರಭಾವಿ ರಾಜಕಾರಣಿ ಓರ್ವ ಹಿರಿಯ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರಂತೆ. ಕಾರಣ ಇಷ್ಟೇ ಆ ರಾಜಕಾರಣಿ ಡ್ರೈವರ್ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದನಂತೆ. ಇದರಿಂದ ಕೋಪಗೊಂಡಿದ್ದ ಆ ಪೊಲೀಸ್ ಅಧಿಕಾರಿ ಡ್ರೈವರ್ ನ್ನು ಥಳಿಸಿದ್ದ. ಇದು ಆ ರಾಜಕಾರಣಿಯನ್ನು ಕೆರಳಿಸಿತ್ತು. ನೀವೇ ನೋಡಿ ರಾಜಕಾರಣಿಗಳು ಪೊಲೀಸರನ್ನು ಏಷ್ಟು ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬುಕ್ಕೆ ಬೇರೆ ಉದಾಹರಣೆ ಬೇಕೆ.

Edited By : Nagesh Gaonkar
PublicNext

PublicNext

13/07/2022 07:40 pm

Cinque Terre

230.33 K

Cinque Terre

2

ಸಂಬಂಧಿತ ಸುದ್ದಿ