ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರೂಜಿ ಹತ್ಯೆ ಹಂತಕರನ್ನು ಹಿಡಿದ ಪೊಲೀಸರಿಗೆ ಅವಾರ್ಡ್ : ಹೋಂ ಮಿನಿಸ್ಟರ್

ತುಮಕೂರು: ಸರವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆಕೋರರನ್ನು ಬಂಧಿಸಿದ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವಾರ್ಡ್ ನೀಡುವುದಾಗಿ ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಹಾಡ ಹಗಲೇ ಗುರೂಜಿಯನ್ನು ಕೊಂದ ಕೊಲೆಗಾರರನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ರಾಮದುರ್ಗ ಬಳಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇದೇ ವಿಚಾರಕ್ಕೆ ಮಾತನಾಡಿದ ಸಚಿವರು ಹುಬ್ಬಳ್ಳಿ, ರಾಮದುರ್ಗ ಪೊಲೀಸರು ಒಳ್ಳೆ ಕೆಲಸ ಮಾಡಿದ್ದಾರೆ. ಜೆಸಿಬಿ ಅಡ್ಡ ಇಟ್ಟು ಹತ್ಯೆ ಮಾಡಿದ ಆರೋಪಿಗಳನ್ನ ತಡೆದಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರು ಆರೋಪಿಗಳು ಗಡಿದಾಟಿ ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗುತ್ತಿದ್ದರು.

ಪೊಲೀಸರ ಕಾರ್ಯವೈಖರಿಗೆ ಹೃದಯ ತುಂಬಿ ಬಂದಿದೆ. ನಾಳೆ ಪೊಲೀಸರನ್ನ ಭೇಟಿ ಮಾಡಿ ಅವಾರ್ಡ್ ಘೋಷಣೆ ಮಾಡ್ತೇನೆ ಹಾಗೂ ಸರ್ಟಿಫೀಕೇಟ್ ಕೊಡ್ತೀವಿ ಎಂದು ಮೆಚ್ಚುಗೆಯ ಮಾತನಾಡಿದ್ದಾರೆ.

Edited By : Nirmala Aralikatti
PublicNext

PublicNext

06/07/2022 05:00 pm

Cinque Terre

36.62 K

Cinque Terre

4

ಸಂಬಂಧಿತ ಸುದ್ದಿ