ದಾವಣಗೆರೆ: ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
32 ವರ್ಷದ ಹರೀಶ್ ಬಂಧಿತ ಆರೋಪಿ. ತಿಮ್ಲಾಪುರ ಗ್ರಾಮದ ಈತ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಇದೇ ಗ್ರಾಮದ ಗೀತಮ್ಮ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಮಹಿಳೆ. ಚಿನ್ನಪ್ಪ ಎಂಬುವವರ ಪತ್ನಿಯಾದ ಗೀತಮ್ಮಳ ಮೇಲೆ ಕಳೆದ 22 ನೇ ತಾರೀಖಿನಂದು ರಾತ್ರಿ 7 ಗಂಟೆಯಿಂದ 9 ಗಂಟೆಯ ಮಧ್ಯದ ಅವಧಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಳಿಕ ಆರೋಪಿ ಪರಾರಿಯಾಗಿದ್ದ.
ಪ್ರಕರಣದ ಆರೋಪಿಯ ಪತ್ತೆಗಾಗಿ ಚನ್ನಗಿರಿ ಡಿವೈಎಸ್ಪಿ ಕೆ. ಎಂ. ಸಂತೋಷ್ ರ ಮಾರ್ಗದರ್ಶನಲ್ಲಿ ಹೊನ್ನಾಳಿ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಹೊನ್ನಾಳಿ ಸರ್ಕಲ್ ಇನ್ ಸ್ಪೆಕ್ಟರ್ ಟಿ. ವಿ. ದೇವರಾಜ್, ಪಿಎಸ್ ಐ ಬಸವರಾಜ್ ಬಿರಾದಾರ, ಸಿಬ್ಬಂದಿಯಾದ ಕೆ. ರಾಜು, ಎ. ಎಂ. ಸಿದ್ದನಗೌಡ, ರಂಗನಾಥ್, ನಾಗನಗೌಡ, ಮೌನೇಶಾಚಾರಿ, ಜಗದೀಶ, ಯೋಗೇಶ, ಸುನೀಲ್ ಕುಮಾರ್, ಚೇತನ್ ಕುಮಾರ್, ರಾಘವೇಂದ್ರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಹಾಗೂ ಎಎಸ್ಪಿ ಆರ್. ಬಿ. ಬಸರಗಿ ಅಭಿನಂದಿಸಿದ್ದಾರೆ.
PublicNext
25/06/2022 07:55 pm