ವ್ಯಕ್ತಿಯೊಬ್ಬ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ತಲವಾರಿನಿಂದ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ವ್ಯಕ್ತಿಯೋರ್ವ ಚೂಪಾದ ತಲ್ವಾರ್ ತೆಗೆದು ಹಲ್ಲೆ ಮಾಡಿ ಲಾಕ್ ಆದ ಘಟನೆ ನಡೆದಿದೆ. ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಗೆ ವ್ಯಕ್ತಿಯ ಮೇಲೆ ಅನುಮಾನ ಬಂದು ಕಾರ್ ನಿಲ್ಲಿಸಿ ವ್ಯಕ್ತಿಯ ಬಳಿ ಪರಿಶೀಲನೆ ಮಾಡಲು ಹೋಗುತ್ತಿದ್ದಂತೆಯೇ ಏಕಾಏಕಿ ವ್ಯಕ್ತಿ ತಲ್ವಾರ್ ತೆಗೆದು ಪೊಲೀಸ್ ಇನ್ಸ್ಪೆಕ್ಟರ್ ನ ಮೇಲೆ ಹಲ್ಲೆ ಮಾಡಲು ಶುರು ಮಾಡುತ್ತಾನೆ. ವ್ಯಕ್ತಿ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಲು ಶುರು ಮಾಡಿದಾಗ ಕೊಂಚ ಕೂಡ ಭಯಪಡದೆ ಪೊಲೀಸ್ ಇನ್ಸ್ಪೆಕ್ಟರ್ ಆತನನ್ನು ನೆಲಕ್ಕೆ ತಳ್ಳಿ ಆತನ ಕೈಯಲ್ಲಿದ್ದ ತಲ್ವಾರ್ ಅನ್ನು ಪೊಲೀಸ್ ಇನ್ಸ್ಪೆಕ್ಟರ್ ಕಿತ್ತುಕೊಳ್ಳುತ್ತಾರೆ. ಕೂಡಲೇ ಸಹಾಯಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಚಾಲಕ ಬಂದು ತಲ್ವಾರ್ ಕಿತ್ತುಕೊಂಡು ಇನ್ಸ್ಪೆಕ್ಟರ್ ನ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಈಗ ಇನ್ಸ್ಪೆಕ್ಟರ್ ಧೈರ್ಯವಂತಿಕೆ ವಿಡಿಯೋ ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
PublicNext
18/06/2022 11:16 am