ಮೈಸೂರು: ಕುಡಿತಕ್ಕೆ ಹಣ ನೀಡಿಲ್ಲ ಅಂತ ಪಾಪಿಯೋರ್ವ ತನ್ನ ತಂಗಿ ಮಗುವನ್ನೇ ಕೊಂದ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಕನಕಗಿರಿ 5ನೇ ಕ್ರಾಸ್ ನಿವಾಸಿ ಸಿದ್ದಮ್ಮ ಎಂಬುವರ ಪುತ್ರ ರಾಜು (30) ಕೃತ್ಯ ಎಸಗಿದ ಪಾಪಿ. ಗಾರೆ ಕೆಲಸ ಮಾಡುತ್ತಿದ್ದ ರಾಜು ಕುಡಿತದ ಚಟಕ್ಕೆ ದಾಸನಾಗಿದ್ದ. ಪ್ರತಿ ದಿನವೂ ಹಣ ನೀಡುವಂತೆ ಅಮ್ಮ ಹಾಗೂ ತಂಗಿಗೆ ಪಿಡಿಸುತ್ತಿದ್ದ. ನಿನ್ನೆ ಮದ್ಯದ ಅಮಲಿನಲ್ಲಿದ್ದ ರಾಜು ಮನೆಗೆ ಬಂದು ತಂಗಿ ರಮ್ಯಾ ಬಳಿ ಹಣ ಕೇಳಿದ್ದಾನೆ. ಈ ವೇಳೆ ತಂಗಿ ಹಣ ಕೊಡದಿದ್ದಕ್ಕೆ ಕುಪಿತಗೊಂಡ ರಾಜು ಜೋಳಿಗೆಯಲ್ಲಿ ಮಲಗಿದ್ದ ತಂಗಿಯ 8 ತಿಂಗಳ ಮಗಳನ್ನು ಎತ್ತಿಕೊಂಡು ಗೋಡೆಗೆ ಅಪ್ಪಳಿಸಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಪಾಪಿ ರಾಜು ಕೃತ್ಯಕ್ಕೆ ಮುಗ್ದ ಕಂದಮ್ಮ ಬಲಿಯಾಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನೆರೆಹೊರೆಯವರು ಮಗುವಿನ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
30/04/2022 11:59 am