ತಿರುವನಂತಪುರಂ: 2019ರಲ್ಲಿ ತನ್ನ ಏಳು ವರ್ಷದ ಮೊಮ್ಮಗನಿಗೆ ಲೈಂಗಿಕ ಕಿರುಕುಳ ನೀಡಿದ 64 ವರ್ಷದ ವೃದ್ಧನಿಗೆ 73 ವರ್ಷಗಳ ಜೈಲು ಶಿಕ್ಷೆ ಮತ್ತು 1,60,000 ರೂಪಾಯಿ ದಂಡ ವಿಧಿಸಿ ಕೇರಳದ ನ್ಯಾಯಾಲಯವು ತೀರ್ಪು ನೀಡಿದೆ.
ಆರೋಪಿಯ ಪತ್ನಿ ಈ ಕೃತ್ಯವನ್ನು ಕಣ್ಣಾರೆ ಕಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಅಪರಾಧಿಗೆ ಪೋಕ್ಸೋ ಕಾಯ್ದೆಯ ಮೂರು ಸೆಕ್ಷನ್‌ಗಳ ಅಡಿಯಲ್ಲಿ ತಲಾ 20 ವರ್ಷ ಜೈಲು ಶಿಕ್ಷೆ, ಪುನರಾವರ್ತಿತ ಅಪರಾಧಕ್ಕಾಗಿ 10 ವರ್ಷ ಮತ್ತು ಸೆಕ್ಷನ್ 377 ಅಡಿಯಲ್ಲಿ ಮೂರು ವರ್ಷ ಸೇರಿ ಒಟ್ಟು 73 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
PublicNext
22/03/2022 03:43 pm