ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಕೊಲೆ ಯತ್ನ ಅರೋಪಿ ವಕೀಲ ಜಗದೀಶ್‌ಗೆ ಜಾಮೀನು ಸಿಕ್ರೂ ಬಿಡುಗಡೆ ಭಾಗ್ಯ ಇಲ್ಲ

ಬೆಂಗಳೂರು: ಕೊಲೆ ಯತ್ನ ಪ್ರಕರಣದಲ್ಲಿ ವಕೀಲ್ ಜಗದೀಶ್‌ಗೆ ಕೋರ್ಟ್‌ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ. ಕೋರ್ಟ್ ಆವರಣದಲ್ಲಿ ನಡೆದ ಗಲಾಟೆಯಲ್ಲಿ ಜಗದೀಶ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ವಕೀಲ ಜಗದೀಶ್ ಜೈಲು ಸೇರಿ 18 ದಿನ ಕಳೆದಿದೆ. ಇಂದು ಕೋರ್ಟ್‌ನಲ್ಲಿ ಜಾಮಿನು ಮಂಜೂರಾಗಿದೆ. ಆದರೂ ಜಗದೀಶ್ ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ‌ ಇಲ್ಲ.

ಕಾರಣ, ಜಗದೀಶ್ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಇದು ಜಾತಿ ನಿಂದನೆ ಪ್ರಕರಣವಾಗಿದ್ದು ಈ ಪ್ರಕರಣದಲ್ಲಿ ಬೇಲ್ ಸಿಕ್ಕ ನಂತರವೇ ಜಗದೀಶ್ ಜೈಲಿನಿಂದ ಹೊರಬರಲು ಸಾಧ್ಯವಾಗುತ್ತದೆ.

Edited By : Nagaraj Tulugeri
PublicNext

PublicNext

05/03/2022 06:01 pm

Cinque Terre

52.16 K

Cinque Terre

0

ಸಂಬಂಧಿತ ಸುದ್ದಿ