ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ, 2 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶ

ಚಿತ್ರದುರ್ಗ : ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ ಎರಡು ಕೋಟಿಗೂ ಹೆಚ್ಚು ಮೌಲ್ಯ ದ ಚಿನ್ನಾಭರಣಗಳು, ವಾಹನಗಳು ಸೇರಿದಂತೆ ಲಕ್ಷಾಂತರ ನಗದು ವಶಪಡಿಸಿಕೊಂಡಿದ್ದಾರೆ.

ಹೀಗೆ ವಶಪಡಿಸಿಕೊಂಡಿದ್ದ ಚಿನ್ನಾಭರಣಗಳು, ನಗದು, ವಾಹನಗಳು ಹಾಗೂ ಜಾನುವಾರುಗಳನ್ನು ಮೂಲ ವಾರೀಸುದಾರರಿಗೆ ನ್ಯಾಯಾಲಯದ ಅನುಮತಿ ಮೇರೆಗೆ ವಾಪಸ್ ವಿತರಿಸುವ ಕೆಲಸವನ್ನು ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ನೇತೃತ್ವದಲ್ಲಿ ಮಾಡಿದ್ದಾರೆ.

ವಶಪಡಿಸಿಕೊಂಡಿರುವ ವಸ್ತುಗಳಲ್ಲಿ 14 ಲಕ್ಷ 50 ಸಾವಿರ ರೂಪಾಯಿ ಮೌಲ್ಯದ 22 ವಾಹನಗಳು,55 ಲಕ್ಷ ರೂ ಮೌಲ್ಯದ ಚಿನ್ನಾಭರಣ ಬೆಳ್ಳಿ ಹಾಗೂ ದೇವರ ಒಡವೆಗಳು,ಹಾಗೂ 1 ಲಕ್ಷ 40 ಸಾವಿರ ರೂಪಾಯಿ ನಗದು ಕೂಡ ವಶಪಡಿಸಿಕೊಂಡಿದ್ದು ಅದೆಲ್ಲವನ್ನು ಕೂಡ ಅವು ಗಳ ಮಾಲೀಕರಿಗೆ ನೀಡುವುದರ ಜೊತೆಗೆ 1 ಕೋಟಿ 40 ಲಕ್ಷ ಇತರೇ ವಸ್ತುಗಳನ್ನು ಹಸ್ತಾಂತರ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

01/12/2021 05:44 pm

Cinque Terre

65.56 K

Cinque Terre

0

ಸಂಬಂಧಿತ ಸುದ್ದಿ