ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: 2016ರ ಮೈಸೂರು ಬಾಂಬ್ ಸ್ಫೋಟ ಕೇಸ್‌- ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಬೆಂಗಳೂರು: 2016ರಲ್ಲಿ ಮೈಸೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಅಪರಾಧಿಗಳಿಗೆ ಎನ್ಐಎ ವಿಶೇಷ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ.

ತಮಿಳುನಾಡಿನ ಉಗ್ರರಾದ ಎನ್.ಅಬ್ಬಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಬಾಸ್‌ಗೆ 10 ವರ್ಷ ಜೈಲು, ಎಂ.ಸಾಮ್ಸನ್ ಕರೀಂ ರಾಜಾ ಅಲಿಯಾಸ್ ಕರೀಂಗೆ 5 ವರ್ಷ ಜೈಲು ಹಾಗೂ ದಾವೂದ್ ಸುಲೈಮಾನ್‌ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯವು ಬಂಧಿತರಾಗಿದ್ದ ಈ ಮೂವರು ಉಗ್ರರನ್ನು ಅಪರಾಧಿಗಳು ಎಂದು ಅಕ್ಟೋಬರ್ 8ರಂದು ಘೋಷಣೆ ಮಾಡಿತ್ತು. ಜೊತೆಗೆ ಇಂದು (ಅಕ್ಟೋಬರ್​ 11ಕ್ಕೆ) ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ವಿಧಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ಏನಿದು ಪ್ರಕರಣ?:

2016ರ ಆಗಸ್ಟ್​ 1ರಂದು ಮೈಸೂರು ಕೋರ್ಟ್ ಆವರಣದ ಶೌಚಾಗೃಹದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಸಂಬಂಧವಾಗಿ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ಕೈಗೊಂಡ ಎನ್‌ಐಎ ಅಧಿಕಾರಿಗಳು ತಮಿಳುನಾಡಿನ ಉಗ್ರರಾದ ಎನ್.ಅಬ್ಬಾಸ್ ಅಲಿ, ಎಂ.ಸಾಮ್ಸನ್ ಕರೀಂ ರಾಜಾ ಮತ್ತು ದಾವೂದ್ ಸುಲೈಮಾನ್ ಎಂಬುವರನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿದ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ಎನ್‌ಐಎ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

2016ರ ಏ.7ರಂದು ಆಂಧ್ರದ ಚಿತ್ತೂರು ಕೋರ್ಟ್ ಆವರಣ, 2016 ರ ಜೂನ್​ 15 ಕ್ಕೆ ಕೇರಳದ ಕೊಲ್ಲಂ, 2016 ರ ಆ.1 ರಂದು ಮೈಸೂರು, 2016ರ ಸೆ.12 ರಂದು ಆಂಧ್ರದ ನೆಲ್ಲೂರು ಹಾಗೂ 2016 ರ ನವೆಂಬರ್​ 1ಕ್ಕೆ ಕೇರಳದ ಮಲಾಪುರಂ ಕೋರ್ಟ್ ಆವರಣಗಳಲ್ಲಿ ಈ ಅಪರಾಧಿಗಳು ಬಾಂಬ್ ಸ್ಫೋಟಿಸಿದ್ದರು.

Edited By : Vijay Kumar
PublicNext

PublicNext

11/10/2021 07:55 pm

Cinque Terre

70.18 K

Cinque Terre

5

ಸಂಬಂಧಿತ ಸುದ್ದಿ