ನವದೆಹಲಿ: ಕಳೆದ 6 ವರ್ಷಗಳಲ್ಲಿ 680 ಸಿಎಪಿಎಫ್ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ವಿಚಾರವನ್ನು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದೆ.
ಹೌದು. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಒಟ್ಟು 680 ಸಿಬ್ಬಂದಿ ಕಳೆದ ಆರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಿಂದ 2020 ರ ಅವಧಿಯಲ್ಲಿ ಅಪಘಾತಗಳು ಮತ್ತು ಎನ್ಕೌಂಟರ್ಗೆ ಸಾವನ್ನಪ್ಪಿದ ಸಿಬ್ಬಂದಿಗಳ ಸಂಖ್ಯೆ ಕ್ರಮವಾಗಿ 1,764 ಮತ್ತು 323 ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.
ಗಡಿಭಾಗದಲ್ಲಿ ಸೈನಿಕರ ಸುದೀರ್ಘ ನಿಯೋಜನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಕಾರ್ಯಾಚರಣೆಗೆ ಯೋಧರ ನಿಯೋಜನೆ ಇತ್ಯಾದಿಗಳು ಸೇನಾ ಸಿಬ್ಬಂದಿ ಮಾನಸಿಕ ಆರೋಗ್ಯ, ದೈಹಿಕ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯೊಂದು ಈ ಹಿಂದೆ ಹೇಳಿತ್ತು.ಸ ಆದರೆ ಈಗ ಸರ್ಕಾರವೇ ಭಯಾನಕ ಸತ್ಯವನ್ನು ಹೊರ ಹಾಕಿದೆ.
ಸೈನಿಕರು, ಮನೆಯವರ ಬಗ್ಗೆ ಕಾಳಜಿ ತೋರಲಾಗದೆ, ಮನೆಯ ಆಸ್ತಿ, ಹಣಕಾಸು ಅವ್ಯವ್ಯಸ್ಥೆ, ವೈವಾಹಿಕ ಜೀವನದ ಸಮಸ್ಯೆ, ಆರೋಗ್ಯ, ಸಂಬಂಧಗಳಿಂದ ದೂರ ಇರುವುದು ಹೀಗೆ ಅನೇಕ ಕಡೆಗಳಿಂದ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿತ್ತು. ಆದರೆ ಭಾರತೀಯ ಭೂಸೇನೆ ಈ ವರದಿಯನ್ನು ತಿರಸ್ಕರಿಸಿತ್ತು. ಅಷ್ಟೇ ಅಲ್ಲದೆ ಇದು ಕೇವಲ ಮೇಲ್ಮಟ್ಟದ ಅಧ್ಯಯನ ಎಂದು ಹೇಳಿ ಅಧ್ಯಯನ ಅವೈಜ್ಞಾನಿಕದಿಂದ ಕೂಡಿದೆ ಎಂದು ಹೇಳಿತ್ತು.
PublicNext
04/08/2021 07:40 pm