ಕಲಬುರಗಿ: ತ್ರಿಪುರದ ಧಲೈ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಉಗ್ರರು ನಡೆಸಿದ ಪರಿಣಾಮ ರಾಜ್ಯದ ಓರ್ವ ಸೈನಿಕ ಸೇರಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಯೋಧ ರಾಜಕುಮಾರ ಎಂ ಮಾವಿನ್ ಹುತಾತ್ಮ ಯೋಧ. ಸಬ್ಇನ್ಸ್ಪೆಕ್ಟರ್ ಭುರು ಸಿಂಗ್ ಮತ್ತೋರ್ವ ಹುತಾತ್ಮ ಯೋಧ ಎಂದು ಗುರುತಿಸಲಾಗಿದೆ. ಬಿಎಸ್ಎಫ್ ಗಸ್ತುತಂಡದ ಮೇಲೆ ಮಂಗಳವಾರ ಬೆಳಿಗ್ಗೆ ನಿಷೇಧಿತ ಸಂಘಟನೆ ನ್ಯಾಷನಲ್ ಲಿಬರಲ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ)ದ ಭಯೋತ್ಪಾದಕರು ನಡೆಸಿದ್ದಾರೆ ಎನ್ನಲಾಗಿದೆ.
ಯೋಧ ರಾಜಕುಮಾರ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಚಿಂಚನಸೂರು ಗ್ರಾಮ ನೀರವ ಮೌನಕ್ಕೆ ಜಾರಿದೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೂಲಗಳ ಪ್ರಕಾರ ನಾಡಿದ್ದು ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ.
PublicNext
03/08/2021 10:08 pm