ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶತ ಕೋಟ್ಯಧೀಶೆ ಉದ್ಯಮಿ ವಸುಂಧರಾ ಉಗಾಂಡಾದಲ್ಲಿ ಅಕ್ರಮ ಬಂಧನ - ಮಲ, ರಕ್ತ ತುಂಬಿದ ಕೋಣೆಯಲ್ಲಿ ವಾಸ!

ಶತ ಕೋಟ್ಯಧೀಶೆಯಾಗಿರುವ ಭಾರತೀಯ ಮೂಲದ ಉದ್ಯಮಿ ವಸುಂಧರಾ ಓಸ್ವಾಲ್ ಅವರನ್ನು ಪೂರ್ವ ಆಫ್ರಿಕಾ ರಾಷ್ಟ್ರ ಉಗಾಂಡಾದಲ್ಲಿ ಅಕ್ರಮವಾಗಿ ಬಂಧಿಸಿ ಇಡಲಾಗಿದೆ. ಮಲ ಹಾಗೂ ರಕ್ತ ತುಂಬಿದ ಕೊಠಡಿಯಲ್ಲಿ ವಸುಂಧರಾ ಅವರನ್ನು ಬಂಧಿಸಿ ಇಡಲಾಗಿದ್ದು ಅಲ್ಲಿಯ ಘನಘೋರ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. 26 ವರ್ಷ ವಯಸ್ಸಿನ ವಸುಂಧರಾ ಓಸ್ವಾಲ್ ಅವರು ಭಾರತದ ಉದ್ಯಮಿ ಪಂಕಜ್ ಓಸ್ವಾಲ್ ಅವರ ಪುತ್ರಿಯಾಗಿದ್ದಾರೆ.

ಇದೀಗ ವಿಶ್ವ ಸಂಸ್ಥೆಯ ಮೊರೆ ಹೋಗಿರುವ ಪಂಕಜ್​ ಅವರು ತಮ್ಮ ಮಗಳ ಬಿಡುಗಡೆಗೆ ಮಧ್ಯೆ ಪ್ರವೇಶಿಸುವಂತೆ ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಸಹೋದರಿಯನ್ನು ಅಕ್ರಮವಾಗಿ ಬಂಧಿಸಿರುವ ಬಗ್ಗೆ ಫೋಟೋಗಳನ್ನು ಶೇರ್​ ಮಾಡಿರುವ ಅವರ ಸಹೋದರ, ವಸುಂಧರಾಗೆ ಕನಿಷ್ಠ ಸೌಕರ್ಯವನ್ನೂ ನೀಡಿಲ್ಲ. ಆಕೆಯನ್ನು ಇರಿಸಿರುವ ಕೊಠಡಿಯಲ್ಲಿ ಒಂದು ಟಾಯ್ಲೆಟ್ ಇದ್ದು, ಅದು ಮಲ ಹಾಗೂ ರಕ್ತ ಕೂಡಿದೆ. ಆಕೆಗೆ ಐದು ದಿನಗಳವರೆಗೆ ಬಟ್ಟೆ ಬದಲಿಸಲು ಹಾಗೂ ಸ್ನಾನ ಮಾಡಲು ಅವಕಾಶ ನೀಡಲಾಗಿಲ್ಲ. ಸರಿಯಾದ ಆಹಾರ ನೀಡುತ್ತಿಲ್ಲ. ಮಲಗಲು ಚಿಕ್ಕ ಟೇಬಲ್ ನೀಡಲಾಗಿದೆ. ಶಂಕಿತರ ಪರೇಡ್‌ನಲ್ಲಿ ಭಾಗಿಯಾಗುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದಿದ್ದಾರೆ.

ಇದೇ ಅಕ್ಟೋಬರ್​ 1ರಂದು ಶಸ್ತ್ರಾಸ್ತ್ರ ಹೊಂದಿದ್ದ 20 ಪುರುಷರ ತಂಡ ಏಕಾಏಕಿ ವಸುಂಧರಾ ಓಸ್ವಾಲ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ಆದರೆ ಅವರು ತಾವು ಯಾವ ತನಿಖಾ ಸಂಸ್ಥೆಗೆ ಸೇರಿದವರು ಎಂದು ಹೇಳಿಲ್ಲ. ನ್ಯಾಯಾಲಯಕ್ಕೂ ಹಾಜರುಪಡಿಸಿಲ್ಲ. ಆಕೆಯ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.

Edited By : Nagaraj Tulugeri
PublicNext

PublicNext

17/10/2024 09:05 pm

Cinque Terre

28.15 K

Cinque Terre

0

ಸಂಬಂಧಿತ ಸುದ್ದಿ