ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಿನ್ನೆ ಬುಧವಾರ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮುಸ್ತಾಕ್ ಅಹಮದ್ ಹುತಾತ್ಮರಾಗಿದ್ದಾರೆ. ಹಾಗೂ ಘಟನೆಯಲ್ಲಿ ಇನ್ನೋರ್ವ ಕಾನ್ಸ್‌ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ ಮುಸ್ತಾಕ್ ಅಹಮದ್ ಅವರ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸಲಾಗಿದೆ. ಶವ ನೋಡಿದ ಕುಟುಂಬಸ್ಥರು ಬಹುವಿಧ ಶೋಕದಿಂದ ರೋಧಿಸಿದ್ದಾರೆ. ಈ ದೃಶ್ಯ ಎಂಥವರನ್ನೂ ದುಃಖಿಸುವಂತೆ ಮಾಡಿದೆ.
PublicNext
14/07/2022 12:56 pm