ಚಾಮರಾಜನಗರ: ಗುಂಡ್ಲು ಪೇಟೆ ಆರ್‌ಟಿಒ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ರಶೀದಿ ರಹಿತ ನಗದು ಪತ್ತೆಯಾಗಿದೆ. ದಾಳಿ ವೇಳೆ ಚೆಕ್‌ಪೋಸ್ಟ್‌ನಲ್ಲಿ 94,950 ರೂ. ನಗದು ಪತ್ತೆಯಾಗಿದೆ.
ಚೆಕ್ ಪೋಸ್ಟ್ ನಲ್ಲಿ ಅವ್ಯಾಹತವಾಗಿ ಲಂಚ ಪಡೆಯುತ್ತಿದ್ದ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ. ಮೈಸೂರು, ಚಾಮರಾಜನಗರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್‌ಪಿ ಇಬ್ಬರು, ಡಿವೈಎಸ್‌ಪಿ , ಮೂವರು ಇನ್ಸ್ ಪೆಕ್ಟರ್ ತಂಡ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರ ದಾಳಿ 94,950 ರೂಪಾಯಿ ಪತ್ತೆಯಾಗಿದೆ. 7,999 ರೂಪಾಯಿಗೆ ಯಾವುದೇ ರಶೀದಿ ಹಾಕಿದೆ ಸಂಗ್ರಹಿಸಿದ್ದರು.
ಇನ್ನುರಾಜ್ಯದ ಆರ್ ಟಿ ಒ ಚೆಕ್ ಪೋಸ್ಟ್ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಧಿಡೀರ್ ದಾಳಿ ನಡೆಸಿದೆ. ಹಣ ವಸೂಲಿ ದೂರುಗಳು ಕೇಳಿ ಬಂದ ಹಿನ್ನೆಲೆ ಕಲಬುರಗಿ, ಬೀದರ್ ನಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ಚೆಕ್ ಪೋಸ್ಟ್ ಸೇರಿ ರಾಜ್ಯದ ಹಲವು ಲೋಕಾಯುಕ್ತ ತಂಡ ಧಿಡೀರ್ ದಾಳಿ ನಡೆಸಿದೆ. ಕಲಬುರಗಿ, ಬೀದರ್, ಲೋಕಾಯುಕ್ತ ತಂಡ ಈ ಕಾರ್ಯಾಚರಣೆ ನಡೆಸಿ ಪರಿಶೀಲನೆ ನಡೆಸಿದೆ.
PublicNext
30/09/2022 04:32 pm