ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಮು ಗಲಭೆ ಸೃಷ್ಟಿಸಲೆಂದೇ ಹರ್ಷನ ಕೊಲೆ ಮಾಡಲಾಗಿದೆ: ಎನ್‌ಐಎ ತನಿಖೆಯಲ್ಲಿ ಬಹಿರಂಗ

ಬೆಂಗಳೂರು: ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಹತ್ಯೆ ಪ್ರಕರಣದ ತನಿಖೆಗೆ ರೋಚಕ ತಿರುವು ಸಿಕ್ಕಿದೆ.

ಜನರಿಗೆ ಭಯವುಂಟು ಮಾಡೋದು ಹಾಗೂ ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸುವ ಉದ್ದೇಶದಿಂದ ಆರೋಪಿಗಳಿಗೆ ಇತ್ತು ಎಂಬುದು ಇದುವರೆಗೆ ಎನ್‌ಐಎ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಅಂಶಗಳು ಎನ್‌ಐಎ ದಾಖಲಿಸಿದ ಎಫ್ಐಆರ್‌ನಲ್ಲಿ ನಮೂದಾಗಿವೆ.

ಶಿವಮೊಗ್ಗ ಹರ್ಷನ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಕೊಲೆಯ ಉದ್ದೇಶ ಸಮಾಜದಲ್ಲಿ ಭಯವನ್ನುಂಟು ಮಾಡೋದಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶ ಆಗಿತ್ತು. ಮಾರಕಾಸ್ತ್ರವನ್ನು ಬಳಸಿ ಜನರಿಗೆ ಭಯ ಉಂಟು ಮಾಡುವ ಉದ್ದೇಶವನ್ನು 11 ಮಂದಿ ಆರೋಪಿಗಳು ಹೊಂದಿದ್ದರು. ಈ ವಿಚಾರ ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ

Edited By : Nagaraj Tulugeri
PublicNext

PublicNext

02/04/2022 08:10 pm

Cinque Terre

44.35 K

Cinque Terre

21

ಸಂಬಂಧಿತ ಸುದ್ದಿ