ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಆರೋಪಿಗಳ ತಲೆ ಕೂದಲು ಮಾದರಿ ವಾಪಸ್ಸ್ ಕಳುಹಿಸಿದ ವಿಧಿವಿಜ್ಞಾನ ಪ್ರಯೋಗಾಲಯ

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ನಂಟು ಆರೋಪದಡಿ ಬಂಧಿತ ಆರೋಪಿಗಳಿಂದ ಸಂಗ್ರಹಿಸಿದ ತಲೆ ಕೂದಲು ಮಾದರಿಯನ್ನು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಾಪಸ್ಸು ಕಳುಹಿಸಿದ್ದಾರೆ.

ಆರೋಪಿಗಳು ಮಾದಕ ವ್ಯಸನಿಗಳಾಗಿರುವ ಸಂಶಯವಿದ್ದ ಹಿನ್ನೆಲೆಯಲ್ಲಿ ಅದನ್ನು ಖಾತರಿಪಡಿಸಿಕೊಳ್ಳಲು ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ಮೂತ್ರ, ರಕ್ತ, ತಲೆ ಕೂದಲು ಪರೀಕ್ಷೆಗೆ ಮಾದರಿ ಸಂಗ್ರಹಿಸಿತ್ತು.

ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹಾಗೂ ಇತರೆ ಆರೋಪಿಗಳ ಮಾದರಿಯನ್ನು ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.

ಆದರೆ 'ಕೂದಲು ಮಾದರಿ ಸಂಗ್ರಹಿಸಿದ ವಿಧಾನ ವೈಜ್ಞಾನಿಕವಾಗಿಲ್ಲ' ಎಂದು ಹೇಳಿ ವಾಪಸ್ಸು ಕಳುಹಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ, 'ಸಣ್ಣ ತಾಂತ್ರಿಕ ಕಾರಣದಿಂದ ಈ ರೀತಿಯಾಗಿದೆ.

ಈಗ ಎಲ್ಲವೂ ಸರಿಯಾಗಿದೆ' ಎಂದಿದ್ದಾರೆ.

'ರಕ್ತ ಹಾಗೂ ಮೂತ್ರದ ಮಾದರಿಯು ಈಗಾಗಲೇ ಪ್ರಯೋಗಾಲಯದಲ್ಲಿ ಇದೆ. ಮೊದಲ ಬಾರಿಗೆ ತಲೆ ಕೂದಲು ಪರೀಕ್ಷೆ ಮಾಡಿಸಲಾಗಿದೆ.

ಅದರ ಜೊತೆಗೇ ಹಲವು ತಾಂತ್ರಿಕ ಪುರಾವೆಗಳು, ಜಪ್ತಿ ಮಾಡಲಾದ ವಸ್ತುಗಳು ಇವೆ' ಎಂದೂ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

02/10/2020 11:13 pm

Cinque Terre

86.54 K

Cinque Terre

1