ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ : ಜೈಲು ಹಕ್ಕಿಗಳಿಗೆ ಸಿಗದ ಜಾಮೀನು ಜೈಲು ವಸತಿಯೇ ಗತಿ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ನಲ್ಲಿ ಪರಪ್ಪನಗ್ರಹಾರದ ಅತಿಥಿಯಾಗಿರುವ ನಟಿಯರಿಬ್ಬರು ಸೇರಿದಂತೆ ಇತರರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

A2 ರಾಗಿಣಿ ದ್ವಿವೇದಿ, A14 ಸಂಜನಾ ಗಲ್ರಾನಿ ಮತ್ತು A4 ಪ್ರಶಾಂತ್ ರಂಕಾ ಅವರುಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ.24ರಂದು ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಅದರಂತೆ ಹೈಕೋರ್ಟ್ ಈಗ ರಾಗಿಣಿ, ಸಂಜನಾ, ಪ್ರಶಾಂತ್ ರಂಕಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಆರೋಪಿಗಳ ಪರ ವಕೀಲರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರಾಗಿದ್ದರು.

ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ರವರ ಪೀಠ ನಟಿಯರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದರಿಂದ ಇಬ್ಬರೂ ನಟಿಯರಿಗೆ ಕನಿಷ್ಠ 15 ದಿನ ಜೈಲೇ ಗತಿ ಎಂಬಂತಾಗಿದೆ. ಇದೀಗ ಆರೋಪಿಗಳಿಗೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವುದೊಂದೇ ದಾರಿ.

ಇನ್ನು ಕೋರ್ಟ್ ಆದೇಶ ಕೇಳುತ್ತಿದ್ದಂತೆ ನಟಿಯರು ಕಣ್ಣೀರು ಸುರಿಸಿ ಕುಸಿದುಬಿದ್ದರು ಎಂದು ಸೆಂಟ್ರಲ್ ಜೈಲ್ ಮೂಲಗಳಿಂದ ತಿಳಿದುಬಂದಿದೆ.

Edited By : Nirmala Aralikatti
PublicNext

PublicNext

03/11/2020 03:02 pm

Cinque Terre

119.94 K

Cinque Terre

5