ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಲಿಪ್ ಕಾರ್ಟ್ ಕಂಪನಿಗೆ ಎಚ್ಚರಿಕೆ ನೀಡಿದ ಜಾರಿ ನಿರ್ದೇಶನಾಲಯ

ಹೊಸದಿಲ್ಲಿ: ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಫ್ಲಿಪ್ ಕಾರ್ಟ್ ಹಾಗೂ ಇತರ ಒಂಬತ್ತು ಜನರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದ ಮೇಲೆ ನಿಮ್ಮ ಕಂಪನಿ ಮೇಲೆ 1.35 ಬಿಲಿಯನ್ ಡಾಲರ್ ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಅವರಿಗೆ ಸೂಚಿಸಲಾಗಿದೆ.

'ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳು ಸೇರಿದಂತೆ, ಭಾರತದ ಕಾನೂನು ಮತ್ತು ನಿಯಂತ್ರಣ ಕ್ರಮಗಳಿಗೆ ಫ್ಲಿಪ್‌ಕಾರ್ಟ್ ಒಳಪಟ್ಟಿದೆ. ನೋಟಿಸ್ ಪ್ರಕಾರ 2009-2015ರವರೆಗಿನ ವಹಿವಾಟಿಗೆ ಸಂಬಂಧಿಸಿದಂತೆ ಅವರು ಬಯಸಿರುವ ವಿವರಗಳ ವಿಚಾರದಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ' ಎಂದು ಫ್ಲಿಪ್‌ಕಾರ್ಟ್ ಪ್ರತಿಕ್ರಿಯೆ ನೀಡಿದೆ.

Edited By : Nagaraj Tulugeri
PublicNext

PublicNext

05/08/2021 02:08 pm

Cinque Terre

56.63 K

Cinque Terre

0

ಸಂಬಂಧಿತ ಸುದ್ದಿ