ತಿರುವನಂತಪುರಂ : ಇತ್ತಿಚ್ಚಿನ ದಿನಗಳಲ್ಲಿ ಅಂತರ್ಜಾಲ ಸದ್ಬಳಕೆಗಿಂತಲೂ ದುರ್ಬಳಕೆಯೇ ಹೆಚ್ಚಾಗುತ್ತಿದೆ.
ಮುಖ್ಯವಾಗಿ ಮಕ್ಕಳ ಪೋರ್ನ್ ವಿಡಿಯೋಗಳನ್ನು ಹುಡುಕುವುದು, ಅಪ್ ಲೋಡ್ ಮತ್ತು ಡೌನ್ ಲೌಡ್ ಮಾಡುವವರ ಮೇಲೆ ಕೇರಳ ಪೊಲೀಸರು ನಿಗಾ ಇಟ್ಟಿದ್ದು, ಅಂಥವರಿಗೆ ಶಾಕ್ ನೀಡುವುದಕ್ಕಾಗಿಯೇ ಡೇಟಾ ಬೇಸ್ ಅನ್ನು ತಯಾರಿಸಿದ್ದಾರೆ.
ಕೇಳರದ ಸೈಬರ್ ಡೊಮ್ ಮತ್ತು ಕೌಂಟರಿಂಗ್ ಚೈಲ್ಡ್ ಸೆಕ್ಸುವಲ್ ಎಕ್ಸ್ ಪ್ಲೋಟೇಶನ್ ವಿಂಗ್ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 350 ಮಂದಿಯ ಡೇಟಾವನ್ನು ಸಂಗ್ರಹಿಸಿದೆ.
ಡಾರ್ಕ್ ನೆಟ್ ವೆಬ್ ಸೈಟ್ ಮತ್ತು ಜಾಲತಾಣ ವೇದಿಕೆಯಲ್ಲಿ ನಿಯಮಿತವಾಗಿ ವಿಡಿಯೋಗಳನ್ನು ಅಪ್ ಲೋಡ್ ಮತ್ತು ಡೌನ್ ಲೋಡ್ ಮಾಡುವುದು ಹಾಗೂ ಚೈಲ್ಡ್ ಪೋರ್ನ್ ವಿಡಿಯೋಗಳಿಗಾಗಿ ಹುಡುಕುವವರ ಮೇಲೆ ನಿಗಾ ಇಡಲಾಗಿದ್ದು, ಪೊಲೀಸ್ ಇಲಾಖೆಯ ತಯಾರಿಸಿರುವ ಸಾಫ್ಟ್ ವೇರ್ ಮೂಲಕ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಚಾಟ್ ರೂಮ್ಸ್ ಮತ್ತು ವೆಬ್ ಸೈಟ್ ಗಳು ಕೇವಲ ಚೈಲ್ಡ್ ಪೋರ್ನ್ ವಿಡಿಯೋಗಳನ್ನು ಮಾತ್ರ ತುಂಬಾ ವಿನಿಮಯ ಮಾಡುತ್ತಿದ್ದು, ತನಿಖಾ ತಂಡವು ಅವುಗಳ ಜಾಲವನ್ನು ಪತ್ತೆಹಚ್ಚಿದೆ.
ಈಗಾಗಲೇ ಅನೇಕ ಮಂದಿಯನ್ನು ಬಂಧಿಸಲಾಗಿದೆ.
ಕೇರಳ ಪೊಲೀಸರ ಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳು ಇದೇ ದಾರಿ ಅನುಸರಿಸಿದರೆ ಅಚ್ಚರಿಪಡಬೇಕಾಗಿಲ್ಲ.
PublicNext
15/12/2020 05:25 pm