ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಂಟಿ ಎಂದವಳ ಜಡೆ ಹಿಡಿದು ಥಳಿಸಿದ ಮಹಿಳೆ

ಆಂಟಿ ಎಂದು ಕರೆದ ಯುವತಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಯುವತಿ ಆಂಟಿ ಎಂದು ಕರೆದಿದ್ದಾಳೆ. ಇದರಿಂದ ಕೋಪಗೊಂಡಿರುವ ಮಹಿಳೆ ಹಾಗೂ ಆಕೆಯ ಸ್ನೇಹಿತೆಯರು ಶಾಪಿಂಗ್ ನಿಲ್ಲಿಸಿ ಜಗಳ ಪ್ರಾರಂಭಿಸಿ ಯುವತಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಅಷ್ಟೇ ಅಲ್ಲದೆ ಮಹಿಳೆ ಯುವತಿಯ ಕೂದಲನ್ನು ಹಿಡಿದು ಎಳೆದಾಡಿದ್ದಾಳೆ.

ಘಟನಾ ಸ್ಥಳದಲ್ಲೇ ಇದ್ದ ಮಹಿಳಾ ಪೊಲೀಸ್ ಮಧ್ಯಪ್ರವೇಶಿಸಿದ ನಂತರ ಇಬ್ಬರೂ ಜಗಳ ನಿಲ್ಲಿಸಿದ್ದಾರೆ. ನಂತರ ಇವರ ಸಮಸ್ಯೆಯನ್ನು ಇತ್ಯರ್ಥಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.

Edited By : Nagesh Gaonkar
PublicNext

PublicNext

05/11/2020 03:45 pm

Cinque Terre

200.02 K

Cinque Terre

18

ಸಂಬಂಧಿತ ಸುದ್ದಿ