ಬೆಂಗಳೂರು: ರೌಡಿಸಂ ಫೀಲ್ಡ್ ನಲ್ಲಿ ಬೆಳೆಯಬೇಕೆಂದು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದವರನ್ನು ಬಂಧಿಸಲು ತೆರಳಿದ್ದ ಪೊಲೀಸ್ ಪೇದೆಗಳ ಮೇಲೆ ಹಲ್ಲೆಗೆ ಯತ್ನಸಿದ ಆರೋಪಿಗಳ ಮೇಲೆ ಫೈರಿಂಗ್ ಮಾಡಲಾಗಿದೆ.
ಆನೇಕಲ್ ತಾಲೂಕಿನ ಮುತ್ಯಾನಲ್ಲೂರಲ್ಲಿ ಇಬ್ಬರಿಗೆ ಮತ್ತು ಅವಡದೇವನಹಳ್ಳಿಯಲ್ಲಿ ಫೈರಿಂಗ್ ನಡೆದಿದೆ.
ಗೋಪಿ, ಗಂಗಾ, ಬಸವ ಮತ್ತು ಅನಂತ್ ಗುಂಡೇಟು ತಿಂದು ಆರೋಪಿಗಳು. ಸದ್ಯ ನಾಲ್ವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಆರೋಪಿಗಳು ಅಕ್ಟೋಬರ್ 30ರಂದು ಅತ್ತಿಬೆಲೆ ಬಳಿಯ ಶೆಟ್ಟಿಹಳ್ಳಿಯಲ್ಲಿ ನಡು ರಸ್ತೆಯಲ್ಲಿಯೇ ವಿನೀತ್ ನನ್ನು ಕೊಲೆ ಮಾಡಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ತೆರಳಿದ್ದರು.
ಈ ವೇಳೆ ಪೇದೆಗಳಾದ ಇರ್ಫಾನ್ ಮತ್ತು ನಾಗರಾಜ್ ಮೇಲೆ ಹಲ್ಲೆಗೆ ಮುಂದಾಗಿದ್ದ ಅನಂತ್ ಹಾಗೂ ಬಸವನ ಅತ್ತಿಬೆಲೆ ಇನ್ಸ್ಪೆಕ್ಟರ್ ಸತೀಶ್, ಸರ್ಜಾಪುರ ಎಸ್ ಐ ಹರೀಶ್ ಫೈರಿಂಗ್ ಮಾಡಿದ್ದಾರೆ.
ಇತ್ತ ಮಹೇಶ್ ಮತ್ತು ಸುರೇಶ್ ಪೇದೆಯ ಮೇಲೆಯ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದ ಗೋಪಿ, ಗಂಗಾನ ಮೇಲೆ ಆನೇಕಲ್ ಡಿವೈಎಸ್ ಪಿ ಮಹಾದೇವ್ ಮತ್ತು ಆನೇಕಲ್ ಇನ್ಸ್ಪೆಕ್ಟರ್ ಕೃಷ್ಣ ಫೈರಿಂಗ್ ಮಾಡಿದ್ದಾರೆ.
PublicNext
02/11/2020 11:25 am