ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆಯ ಮೇಲಿನ ಸೇಡಿಗೆ ಮಗನನ್ನು ಕೊಂದ ತಾಲಿಬಾನಿಗಳು

ಕಾಬೂಲ್: ನರಕ ಎಂದರೆ ಹೇಗಿರುತ್ತದೆ ಎನ್ನುವುದನ್ನು ಸದ್ಯ ಅಫ್ಘಾನಿಸ್ತಾನದಲ್ಲಿಯ ಕೆಲವು ಘಟನೆಗಳನ್ನು ನೋಡಿದರೆ ತಿಳಿಯುತ್ತದೆ. ನರರಾಕ್ಷಸರಂತೆ ವರ್ತಿಸುತ್ತಿರುವ ತಾಲಿಬಾನಿಗಳ ಅಟ್ಟಹಾಸಕ್ಕೆ ಪಾರವೇ ಇಲ್ಲವಾಗಿದೆ. ವ್ಯಕ್ತಿಯೊಬ್ಬ ತನ್ನ ವಿರೋಧಿಗಳೊಂದಿಗೆ ಕೈ ಜೋಡಿಸಿದ್ದಾನೆಂಬ ಶಂಕೆ ಮೇಲೆ ತಾಲಿಬಾನ್ ಉಗ್ರರು ಮುಗ್ಧ ಮಗುವನ್ನು ಅಮಾನುಷವಾಗಿ ಕೊಂದು ಹಾಕಿದ್ದಾರೆ. ಈ ಆಘಾತಕಾರಿ ಪ್ರಕರಣ ತಖರ್ ಪ್ರಾಂತ್ಯದಲ್ಲಿ ನಡೆದಿದೆ.

ಪಂಜಶೀರ್ ಮತ್ತು ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ಒಳಗೊಂಡ ಸ್ವತಂತ್ರ ಮಾಧ್ಯಮವಾದ ಪಂಜಶೀರ್ ಅಬ್ಸರ್ವರ್ ಈ ತಾಲಿಬಾನ್ ಕ್ರೌರ್ಯದ ವರದಿಯನ್ನು ಪ್ರಕಟಿಸಿದೆ. ಈ ಘಟನೆಯು ತಾಲಿಬಾನ್ ವಿರುದ್ಧ ಧ್ವನಿ ಎತ್ತಿದವರಿಗೆ ಹೇಗೆ ಶಿಕ್ಷೆಯಾಗುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ನಂತರ, ತಾಲಿಬಾನ್ ತಾನು ಈ ಹಿಂದಿನಂತೆ ಆಡಳಿತ ನಡೆಸುವುದಿಲ್ಲ ಎಂದು ಪದೇ ಪದೇ ಹೇಳುತ್ತಿದೆ.. ಆದರೆ ತನ್ನ ಹಳೇ ಚಾಳಿ ಬಿಟ್ಟಿಲ್ಲ. ತಾಲಿಬಾನಿಯರು ಮತ್ತೆ ಹಿಂಸಾತ್ಮಕ ಮನಸ್ಥಿತಿಯೊಂದಿಗೆ ಮರಳಿದ್ದಾರೆ ಎಂದು ತಜ್ಞರು ನಂಬಿದ್ದಾರೆ.

Edited By : Nirmala Aralikatti
PublicNext

PublicNext

28/09/2021 05:23 pm

Cinque Terre

115.62 K

Cinque Terre

2

ಸಂಬಂಧಿತ ಸುದ್ದಿ