ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಅನೇಕರು ಬಲಿಯಾಗಿದ್ದು, ಜನರು ಭಯದ ವಾತಾವರಣದಲ್ಲೇ ಜೀವನ ನಡೆಸುತ್ತಿದ್ದಾರೆ.
ಅಫ್ಘಾನಿಸ್ತಾನದ ಶೆಬರ್‌ಘನ್‌ನ ಮನೋರಂಜನಾ ಪಾರ್ಕ್‌ಗೆ ತಾಲಿಬಾನ್ ಉಗ್ರರು ಬೆಂಕಿ ಇಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಆಗಸ್ಟ್ 17ರಂದು ನಡೆದಿದ್ದು, ಇಸ್ಲಾಮಿಕ್ ಆಚರಣೆಗಳಿಗೆ ವಿರುದ್ಧವಾದ ಪ್ರತಿಮೆಗಳು ಮತ್ತು ವಿಗ್ರಹಗಳು ಇದ್ದಿದ್ದರಿಂದ ತಾಲಿಬಾನ್ ಉಗ್ರರು ಶೆಬರ್‌ಘನ್‌ನ ಪಾರ್ಕ್‌ಗೆ ಬೆಂಕಿ ಇಡಲಾಗಿದೆ ಎಂದು ಆರೋಪಿಸಲಾಗಿದೆ.
PublicNext
19/08/2021 10:54 pm