ಕರಾಚಿ: ವಾಯುವ್ಯ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಆರೋಪದಡಿ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ದುಷ್ಕರ್ವಿುಗಳ ಗುಂಪೊಂದು ದೇವಾಲಯದ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ ಪ್ರಕರಣ ಇದಾಗಿದ್ದು, ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ನಡೆದಿದೆ.
ದೇವಾಲಯವನ್ನು ಇತ್ತೀಚೆಗೆ ಜೀಣೋದ್ಧಾರ ಮಾಡಲಾಗಿತ್ತು. ದುಷ್ಕರ್ವಿುಗಳ ಗುಂಪು ಹಳೆಯ ರಚನೆ ಜತೆಗೆ ಇತ್ತೀಚೆಗೆ ನಡೆಸಲಾದ ಎಲ್ಲ ಕಾಮಗಾರಿಯನ್ನು ಧ್ವಂಸಗೊಳಿಸಿದೆ.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಶ್ವ ವ್ಯಾಪಿ ಖಂಡನೆ ವ್ಯಕ್ತವಾಗಿದೆ.
PublicNext
31/12/2020 06:18 pm