ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡುವ ಅನೇಕ ವರದಿಗಳನ್ನು ನಾವು ನೋಡಿದ್ದೇವೆ. ಇದೇ ವಿಚಾರವಾಗಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.
ಪಾಕಿಸ್ತಾನದ 22 ಕೋಟಿ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಸುಮಾರು 70-80 ಲಕ್ಷ ಇರುವ ಅಂದಾಜು ಇದೆ. ಇವರಲ್ಲಿ ಹಿಂದೂ ಮತ್ತು ಕ್ರೈಸ್ತ ಸಮುದಾಯದವರ ಸಂಖ್ಯೆ ಸುಮಾರು 25 ಲಕ್ಷ ಮಾತ್ರ ಇದೆ. ಹಿಂದೂ ಮತ್ತು ಕ್ರೈಸ್ತ ಸಮುದಾಯದ ಅಪ್ರಾಪ್ತ ಹೆಣ್ಮಕ್ಕಳನ್ನ ಗುರಿಯಾಗಿಸಿಕೊಂಡು ಪ್ರತಿ ವರ್ಷ ಒಂದು ಸಾವಿರಕ್ಕೂ ಅಪ್ರಾಪ್ತ ಹೆಣ್ಣು ಮಕ್ಕಳ ಅಪಹರಣ ಮತ್ತು ಮತಾಂತರ ಕಾರ್ಯ ನಡೆಯುತ್ತಿದೆ. ಅದರಲ್ಲೂ ಸಿಂಧ್ ಪ್ರಾಂತ್ಯದಲ್ಲೇ ಬಹುತೇಕ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ.
ಅಲ್ಪಸಂಖ್ಯಾತ ಸಮುದಾಯದವರ ಬಡತನ, ಅಭದ್ರತೆ, ಭಯದ ಲಾಭ ಪಡೆದು ದುಷ್ಕರ್ಮಿಗಳು ಹೆಣ್ಮಕ್ಕಳನ್ನ ಅಪಹರಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಈ ಪ್ರಕರಣಗಳು ಇನ್ನೂ ಹೆಚ್ಚಾಗಿವೆ ಎನ್ನಲಾಗಿದೆ.
PublicNext
29/12/2020 03:39 pm