ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುದ್ದಿಮಾಂದ್ಯತೆ ಮುಚ್ಚಿಟ್ಟ ವೀರ್ಯ ದಾನಿ-ಆದರೆ ಅಸಲಿ ಸತ್ಯ ಈಗ ಬಯಲು!

ಇಲ್ಲೊಬ್ಬ ಆಸಾಮಿ ತಾನು ಬುದ್ದಿಮಾಂದ್ಯತೆಯನ್ನ ಮುಚ್ಚಿಟ್ಟು ವೀರ್ಯದಾನ ಮಾಡಿದ್ದಾನೆ. ಇದರಿಂದ ಈಗಾಗಲೇ 15 ಮಕ್ಕಳು ಜನಿಸಿವೆ. ಆದರೆ, ಈ ಸತ್ಯ ಹೊರ ಬಂದಿದ್ದಾರೂ ಹೇಗೆ ಅಂತಿರೋ ಹೇಳ್ತಿವಿ ನೋಡಿ.

ಬುದ್ದಿ ಮಾಂದ್ಯ ವ್ಯಕ್ತಿ ಅಂತ ಗೊತ್ತೇ ಆಗಲ್ವೇ. ವೀರ್ಯದಾನ ಅದ್ಹೇಗೆ ಮಾಡೋಕೆ ಸಾಧ್ಯ. ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ಹೌದು. ಇದು ನಿಜವೇ, ಆದರೆ, ಯುನೈಟೆಡ್ ಕಿಂಗ್ಡಮ್‌ ನ 37 ವರ್ಷದ ವ್ಯಕ್ತಿ ಜೇಮ್ಸ್ ಮ್ಯಾಕ್‌ಡೌಗಲ್ ಎಂಬಾತನೇ ಈ ಒಂದು ಮಹಾ ಪಾಪಿ ಕೆಲಸ ಮಾಡಿ ಬಿಟ್ಟಿದ್ದಾನೆ.

ಈತನಿಗೆ ಎಕ್ಸ್‌ ಸಿಂಡ್ರೋಮ್ ಇದ್ದು ಈತ ಅದನ್ನ ಮುಚ್ಚಿಟ್ಟಿದ್ದಾನೆ. ಆದರೆ, ಈ ಒಂದು ರೋಗ ಒಂದು ರೀತಿ ಅನುವಶಿಕವಾಗಿಯೇ ಬರುತ್ತದೆ. ಈ ವ್ಯಕ್ತಿಯ ವೀರ್ಯದಿಂದ ಹುಟ್ಟುವ ಮಕ್ಕಳು ಕಡಿಮೆ ಐಕ್ಯೂ ಹಾಗೂ ಮಕ್ಕಳ ಬೆಳವಣಿಗೆಗೆ ಕಾರಣವೂ ಆಗಬಹುದು.

ಆದರೆ, ಈ ಪುಣ್ಯಾತ್ಮ ತನ್ನ ವೀರ್ಯದಿಂದ ಹುಟ್ಟಿದ ಮಕ್ಕಳು ನನ್ನವೇ,ಅವುಗಳ ಭವಿಷ್ಯದ ವ್ಯವಸ್ಥೆಯ ಹಕ್ಕಿಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವ ಹೂಡಿದ ಮೇಲೇನೆ ಈ ಒಂದು ಸತ್ಯ ಬಹಿರಂಗವಾಗಿದೆ. ಹಾಗೇನೆ ಈ ವ್ಯಕ್ತಿಯಲ್ಲಿದ್ದ ನ್ಯೂನತೆಯ ಸತ್ಯವೂ ತಿಳಿದು ಹೋಗಿದೆ.

Edited By :
PublicNext

PublicNext

03/06/2022 10:30 am

Cinque Terre

52.59 K

Cinque Terre

0

ಸಂಬಂಧಿತ ಸುದ್ದಿ