ಬಂಗಾಳ: ಓಡಿ ಹೋದ ಪತ್ನಿಯನ್ನ ಹುಡುಕಿ ಕರೆದುಕೊಂಡು ಬಂದವರಿಗೆ 5 ಸಾವಿರ ಬಹುಮಾನ ಕೊಡುವುದಾಗಿ ಪತಿ ಫೇಸ್ ಬುಕ್ ನಲ್ಲಿ ಘೋಷಿಸಿರೋ ಘಟನೆ ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ನಡೆದಿದೆ.
ಪತ್ನಿ ತಾನೊಬ್ಬಳೇ ಹೋಗದೆ ತನ್ನಮಗುವನ್ನೂ ಕರೆದುಕೊಂಡು ಓಡಿ ಹೋಗಿದ್ದಾಳೆ. ತನಗೆ ಮೊಬೈಲ್ ತೆಗೆದುಕೊಂಡು ಬಂದ ವ್ಯಕ್ತಿ ಜೊತೆಗೇನೆ ತನ್ನ ಪತ್ನಿ ಓಡಿ ಹೋಗಿದ್ದಾಳೆ ಎಂದು ಪತ್ನಿ ದೂರಿದ್ದಾನೆ.
ಈ ಬಗ್ಗೆ ಪೊಲೀಸರಿಗೂ ದೂರು ಕೊಟಿದ್ದೇನೆ ಅಂತಲೇ ಹೇಳಿದ್ದಾರೆ. ಆದರೆ ಪೊಲೀಸರು ಇದನ್ನ ತಳ್ಳಿಹಾಕಿದ್ದಾರೆ. ಕುಟುಂಬದಿಂದ ಯಾವುದೇ ಮಾಹಿತಿ ಬಂದಿಲ್ಲ ಅಂತಲೂ ತಿಳಿಸಿದ್ದಾರೆ.
ಇಷ್ಟೆಲ್ಲ ಆದ್ಮೇಲೆ ಪತಿ ಪತ್ನಿ ಮಗುವಿನೊಂದಿಗೆ ಓಡಿ ಹೋದ ವಿಷಯವನ್ನ ಫೇಸ್ ಬುಕ್ ನಲ್ಲಿ ಹಂಚಿಕೊಡಿದ್ದಾನೆ. ಹುಡುಕಿ ಕೊಟ್ಟವರಿಗೆ 5 ಸಾವಿರ ರೂಪಾಯಿ ಬಹುಮಾನವನ್ನೂ ಕೊಡೋದಾಗಿ ತಿಳಿಸಿದ್ದಾರೆ. ಈ ವಿಶಿಷ್ಠ ಸುದ್ದಿ ಈಗ ವೈರಲ್ ಆಗುತ್ತಲೇ ಇದೆ.
PublicNext
28/12/2021 07:13 pm