ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ-ಮಗಳು ಇಬ್ಬರೂ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಹೊರ ವಲಯದ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರದಲ್ಲಿ ನಡೆದಿದೆ.
ರೋಹಿಣಿ ಶೆಟ್ಟಿ 33 ವರ್ಷ ಚಿಯಾನ್ ಶೆಟ್ಟಿ 5 ವರ್ಷ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು
ಮೃತಪಟ್ಟ ರೋಹಣಿ ತಾಯಿ ಕೆಲ ವರ್ಷಗಳ ಹಿಂದೆ ನೇಣಿಗೆ ಶರಣಾಗಿ ಮೃತಪಟ್ಟಿದ್ದರು. ಇದರಿಂದ ಜೀವನದಲ್ಲಿ ತುಂಬಾ ಜಿಗುಪ್ಸೆ ಗೊಂಡು ರೋಹಣಿ ಸಾಕಷ್ಟು ಭಾರಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದರಂತೆ. ಕಳೆದ ರಾತ್ರಿ ಗಂಡ ಮನೆಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುವಾಗ ರೂಮಲ್ಲಿ ಮಲಗಿದ್ದರಂತೆ.
ಬೆಳಿಗ್ಗೆ ಹೊತ್ತಿಗೆ ಒಂದೇ ಫ್ಯಾನೆಗೆ ಇಬ್ಬರು ನೇಣಿಗೆ ಶರಣಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ಇನ್ನು ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯನ್ನು ಮುಂದುವರಿಸಿದ್ದಾರೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/04/2022 04:04 pm