ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಥರಸ್ ಹತ್ಯಾಚಾರ : ಯೋಗಿ ಸರಕಾರದ ವೈಫಲ್ಯ...ಕಾಂಗ್ರೆಸ್ಸಿಗೆ ಪ್ರತಿಭಟನೆ ಸಾಫಲ್ಯ

ಉತ್ತರ ಪ್ರದೇಶ ಹಾಥರಸ್ ದಲಿತ ಯುವತಿ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಜಂಘಾಬಲವನ್ನೇ ಉಡುಗಿಸಿದೆ.

ಪ್ರಧಾನಿ ಖಡಕ್ ಸೂಚನೆ ಬರುತ್ತಿದ್ದಂತೆಯೇ ಯೋಗಿ ಸರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ ಕುಮಾರ ಲಕ್ಷರ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರಲ್ಲದೆ ಪ್ರಕರಣವನ್ನು ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಿದ್ದಾರೆ.

ಕೆಲವು ಮೂಲಗಳ ಪ್ರಕಾರ ಯೋಗಿ ಸರಕಾರದ ಸಚಿವಾಲಯದ ಹಿರಿಯ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟವೇ ಹಾಥರಸ್ ಹತ್ಯಾಚಾರ ಪ್ರಕರಣದ ಈ ಎಲ್ಲ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲಿ ಅಧಿಕಾರಿಗಳ ಎರಡು ಗುಂಪುಗಳಾಗಿದ್ದು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಹೇಗಾದರೂ ಮಾಡಿ ಮುಖ್ಯಮಂತ್ರಿ ಯೋಗಿಗೆ ಹತ್ತಿರವಾಗಿರುವ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧಿ ಗುಂಪು ಕಳೆದ ಏಳೆಂಟು ತಿಂಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿತ್ತು ಎಂದು ಇತ್ತೀಚೆಗೆ ನಿವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ

ಇದಕ್ಕೆ ಸಾಕ್ಷಿ ಈ ಪ್ರಕರಣದ ಕೇಂದ್ರ ಬಿಂದುವಾಗಿರುವ, ಹಾಥರಸ್ ಡಿಸ್ಟ್ರಿಕ್ಸ್ ಮ್ಯಾಜಿಸ್ಟೇಟ್,ರಾಜಸ್ತಾನ ಜೈಪೂರ್ ಮೂಲದ ಪ್ರವೀಣ ಕುಮಾರ ಲಕ್ಷರ್ ಎಂದು ವಿಶ್ಲೇಷಿಸಲಾಗುತ್ತಿದೆ. ಶವ ದೆಹಲಿಯಿಂದ ಹಾಥರಸ್ ತಲುಪುತ್ತಿದ್ದಂತೆಯೆ ಈ ಅಧಿಕಾರಿ ಕುಟುಂಬಕ್ಕೆ ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಮಧ್ಯರಾತ್ರಿ ಶವ ಸಂಸ್ಕಾರ ಮಾಡಿದ್ದಾರೆ. ಇದರಿಂದಾಗಿ ಇಲ್ಲಿ ಅನೇಕ ಸಂಶಯಗಳು ಹುಟ್ಟಿಕೊಂಡಿವೆ. ಅಧಿಕಾರಿಯ ಎಡವಟ್ಟಿನಿಂದಾಗಿಯೋ ಅಥವಾ ಉದ್ದೇಶಪೂರ್ವಕವಾಗಿ ಕುಟುಂಬದ ಸದಸ್ಯರನ್ನು ದೂರವಿಟ್ಟು ತರಾತುರಿಯಲ್ಲಿ ಡಿ.ಎಂ ಶವ ಸಂಸ್ಕಾರ ಮಾಡಿದ್ದಾರೆ. ಆದರೆ ಹೀಗೆ ಮಾಡಿದ್ದೇಕೆ ಎಂಬ ಪ್ರತಿಪಕ್ಷಗಳ ಪ್ರಶ್ನೆಗೆ ಸರಕಾರ ಉತ್ತರಿಸಲು ಪರದಾಡುತ್ತಿದೆ.

ಒಂದೆಡೆ ಸರಕಾರದ ವೈಫಲ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಇನ್ನೊಂದೆಡೆ ಪ್ರತಿಭಟನೆ ನೆಪದಲ್ಲಿ ಪ್ರತಿಪಕ್ಷಗಳ ಅತಿರೇಕದ ವರ್ತನೆ ನಿಜಕ್ಕೂ ಖೇದದ ಸಂಗತಿ. ಪೀಡಿತ ಕುಟುಂಬಗಳ ನೆರವಿಗೆ ಬರುವ ನೆಪದಲ್ಲಿ ರಾಜಕೀಯ ಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಇನ್ನೂ ಹೇಯ ಸಂಗತಿ

ಇದಕ್ಕೆ ಬಿಜೆಪಿ, ಕಾಂಗ್ರೆಸ್‌, ಸಮಾಜವಾದಿ, ಬಿಎಸ್ಪಿ ಪಕ್ಷಗಳು ಹೊರತಾಗಿಲ್ಲ. ಹಾಥರಸ್ ಪ್ರಕರಣವನ್ನು ಪ್ರತಿಪಕ್ಷಗಳು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಕೇಂದ್ರ ಸಚಿವೆ ಸೃತಿ ಇರಾನಿ ಆಪಾದಿಸಿದ್ದಾರೆ. 2012 ರ ದೆಹಲಿಯ ನಿರ್ಭಯಾ ಅತ್ಯಾಚಾರ ಹಾಗೂ ಬರ್ಬರ ಕೊಲೆ ಪ್ರಕರಣದಲ್ಲಿ ಇದೆ ಬಿಜೆಪಿ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಕಟುವಾಗಿ ಟೀಕಿಸಿತ್ತು.

ಹಾಗೇ ಅಂದು ತಮ್ಮ ಕಾಂಗ್ರೆಸ್ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದ ರಾಹುಲ್ ಗಾಂಧಿ ಇಂದು ಹಾಥರಸ್ ದಲ್ಲಿ ಯೋಗಿ ಸರಕಾರದ ವಿರುದ್ಧ ಸಹೋದರಿ ಪ್ರಿಯಾಂಕಾ ಜೊತೆ ಬೀದಿಗಿಳಿದಿದ್ದಾರೆ. ನೋಡಿ ರಾಜಕೀಯ ಪಕ್ಷಗಳ ಇಬ್ಬಂದಿತನ. ಇಂತಹ ಅಮಾನವೀಯ ಪ್ರಕರಣಗಳು ರಾಜಕೀಯ ಪಕ್ಷಗಳಿಗೆ ಆಹಾರವಾಗುತ್ತಿರುವುದು ಖೇದಕರ.

ನಿಮ್ಮ ಕ್ಷುಲ್ಲಕ ರಾಜಕೀಯ ಬಿಡಿ, ಪ್ರತಿಭಟನೆ ಬಂಧನ, ರಸ್ತೆ ತಡೆಯಿಂದ ನಿಮಗೆ ಪ್ರಚಾರ ಸಿಗಬಹುದು. ಅದನ್ನು ಬಿಟ್ಟು ಯುವತಿಯ ಕುಟುಂಬಕ್ಕೆ ತ್ವರಿತ ನ್ಯಾಯ ದೊರಕಿಸಲು ಹೋರಾಡಿ ಕೊನೆಗೆ ಆ ದಲಿತ ಯುವತಿ ಆತ್ಮಕ್ಕೆ ಶಾಂತಿಯಾದರೂ ಸಿಕ್ಕೀತೂ.

Edited By :
PublicNext

PublicNext

04/10/2020 05:06 pm

Cinque Terre

116.5 K

Cinque Terre

14