ಬೆಳಗಾವಿ : ಮಕ್ಕಳು ದೇವರ ಸಮಾನ ಮಕ್ಕಳು ಯಾವತ್ತು ಸುಳ್ಳು ಹೇಳುವುದಿಲ್ಲ. ಹಾಗಂತ ತಮ್ಮ ವೈಯಕ್ತಿಕ ಜಗಳದ ಸಲುವಾಗಿ ಸಾಕ್ಷಿ ಹೇಳಲು ಶಾಲಾ ಶಿಕ್ಷಕಿಯೊಬ್ಬರು ಶಾಲಾ ಅವಧಿಯಲ್ಲಿಯೇ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆ ತಂದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಶಿಕ್ಷಕ ಆರ್.ಎನ್.ಮಡಿವಾಳರ ಹಾಗೂ ಶಿಕ್ಷಕಿ ಎಂ.ಕೆ ಜಂಬಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮುಂದೆಯೇ ಮಾರಾಮರಿ ಹೊಡೆದಾಡಿಕೊಂಡಿದ್ದಾರೆ.
ಗಲಾಟೆ ಮಾಡಿಕೊಂಡ ಇಬ್ಬರು ಶಿಕ್ಷಕರು ಪರಸ್ಪರ ದೂರದ ಸಂಬಂಧಿಕರಾಗಿದ್ದು, ಆಗಾಗ ಆಸ್ತಿ ವಿಷಯವಾಗಿ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಹೊಡೆದಾಡಿಕೊಂಡಿರುವುದನ್ನ ಶಾಲಾ ಮಕ್ಕಳು ನೋಡಿದ್ದರು. ಅದಕ್ಕಾಗಿ ಶಿಕ್ಷಕಿ ಸಾಕ್ಷಿ ಹೇಳಲು ವಿದ್ಯಾರ್ಥಿಗಳನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇವರಿಬ್ಬರ ಜಗಳದಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ದುರ್ನಡತೆ ಶಿಕ್ಷಕರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣದ ಡಿಡಿಪಿಐ, ಹಂಚಾಟೆ ಅವರು ಇಬ್ಬರು ಶಿಕ್ಷಕರಿಗೆ ಈಗಾಗಲೇ ನೋಟೀಸ್ ನೀಡಿದ್ದಾರೆ.
PublicNext
02/09/2022 04:36 pm