ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ಮತ್ತೊಂದು ಸ್ಫೋಟಕ ವಿಡಿಯೋ ಬಹಿರಂಗವಾಗಿದೆ. ಹಣಕೊಟ್ಟು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳಿಕೊಡುತ್ತಿರುವ ಕಿರಾತಕನೊಬ್ಬನ ವಿಡಿಯೋ ಮಾಧ್ಯಮಕ್ಕೆ ಸಿಕ್ಕಿದೆ.
ಈ ಮೂಲಕ ಪರೀಕ್ಷೆ ದಂಧೆಕೋರರಿಗೆ ಪಿಎಸ್‌ಐ ಪ್ರಶ್ನೆ ಪತ್ರಿಕೆ ಮೊದಲೇ ಸಿಕ್ಕಿತ್ತಾ ಎನ್ನುವ ಅನುಮಾನ ಬಂದಿದೆ. ಜೊತೆಗೆ ಸಾಮಾನ್ಯವಾಗಿ ಎ ಬಿ ಸಿ ಡಿ ಸಿರೀಸ್‌ನಲ್ಲಿ ಪ್ರಶ್ನೆ ಪತ್ರಿಕೆಗಳು ಬಂದಿರುತ್ತವೆ. ಆದ್ರೆ ಉತ್ತರ ನೀಡುತ್ತಿರುವ ಕಿರಾತಕ ಒಂದೇ ಸಿರೀಸ್‌ನ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಹೇಳುತ್ತಿರೋದ್ರಿಂದ ಅಕ್ರಮದಲ್ಲಿ ಭಾಗಿಯಾದ ಎಲ್ಲ ಅಭ್ಯರ್ಥಿಗಳಿಗೂ ಒಂದೇ ಸಿರೀಸ್‌ನ ಪ್ರಶ್ನೆ ಪತ್ರಿಕೆ ಹಂಚಲಾಗಿತ್ತಾ ಎಂಬ ಅನುಮಾನವೂ ಎದ್ದು ಕಾಣುತ್ತಿದೆ.
ಈತ ಬ್ಲೂಟೂತ್ ಡಿವೈಸ್ ಮೂಲಕ ಹೇಳುವ ಉತ್ತರಗಳನ್ನೇ ಕಳ್ಳ ಅಭ್ಯರ್ಥಿಗಳು ಕೇವಲ ಒಎಂಆರ್‌ನಲ್ಲಿ ಶೇಡ್ ಮಾಡಿ ಸರಳವಾಗಿ ಪರೀಕ್ಷೆ ಪಾಸ್ ಆಗಿ ಪಿಎಸ್‌ಐ ಆಗಬೇಕೆಂಬ ತಿರುಕನ ಕನಸು ಕಂಡಿದ್ದರು ಅನ್ನೋದು ತನಿಖೆಯಿಂದ ಸಾಬೀತಾಗಿದೆ.
PublicNext
24/04/2022 11:33 am