ಮುಂಬೈ: ತಂತ್ರಜ್ಞಾನ ಬಳಸಿಕೊಂಡು ಪರೀಕ್ಷೆಗಳಲ್ಲಿ ಅಕ್ರಮ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಸದ್ಯ ಮಾಸ್ಕ್ ಬಳಕೆ ಕಡ್ಡಾಯವಾಗಿರುವುದನ್ನೇ ದುರಪಯೋಗ ಮಾಡಿಕೊಂಡ ಪೊಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ ಚಿಂಚ್ ವಾಡ್ ನಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ ಸಾಧನದೊಂದಿಗೆ ಫೇಸ್ ಮಾಸ್ಕ್ ಧರಿಸಿ ಅಭ್ಯರ್ಥಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. ಇಲ್ಲಿಯ ಬ್ಲೂ ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಕಾನ್ಸ್ ಸ್ಟೇಬಲ್ ನೇಮಕಾತಿಗಾಗಿ ಪರೀಕ್ಷೆ ನಡೆಯುತ್ತಿತ್ತು. ಈ ಸಮಯದಲ್ಲಿ ಪೊಲೀಸರು ತಪಾಸಣೆ ಮಾಡುವಾಗ ಅಭ್ಯರ್ಥಿಯೊಬ್ಬನ ಮಾಸ್ಕ್ ತೆಗೆಸಿ ನೋಡಿದ ಪೊಲೀಸ್ ಅಧಿಕಾರಿ ಶಶಿಕಾಂತ್ ದೇವಕಾಂತ್ ದಂಗಾಗಿದ್ದಾರೆ.
ಮಾಸ್ಕ್ ನಲ್ಲಿ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿತ್ತು. ಜಿಬಿಎಸ್ ಬ್ಯಾಟರಿ, ಚಾರ್ಜಿಂಗ್ ಪಾಯಿಂಟ್, ಮೊಬೈಲ್ ಸಿಮ್
ಕಾರ್ಡ್, ಸ್ವಿಚ್ ಮತ್ತು ಮೈಕ್ ಕೂಡ ಇದ್ದವು. ಇವುಗಳನ್ನು ವೈರ್ಗಳೊಂದಿಗೆ ಸಂಪರ್ಕಿಸಲಾಗಿತ್ತು. ಇದರ ಮೂಲಕ ಪರೀಕ್ಷೆಯಲ್ಲಿ ಬಂದಿರುವ ಪ್ರಶ್ನೆಗಳಿಗೆ ಬೇರೆ ಕಡೆಗಳಿಂದ ಸುಲಭದಲ್ಲಿ ಉತ್ತರ ಕಂಡುಹಿಡಿಯಲು ಸಾಧ್ಯವಾಗಿತ್ತು.
ತಪಾಸಣೆ ನಡೆಸುತ್ತಿದ್ದಂತೆಯೇ ಅಭ್ಯರ್ಥಿ ಪರೀಕ್ಷೆ ಹಾಲ್ ಬಿಟ್ಟು ಓಡಿಹೋಗಿದ್ದಾನೆ. ಆತನ ವಿರುದ್ಧ ದೂರು ದಾಖಲಾಗಿದ್ದು ಆತನಿಗಾಗಿ ಶೋಧ ಕಾರ್ಯ ನಡೆದಿದೆ.
PublicNext
23/11/2021 03:07 pm