ಗದಗ : ಗದಗ ಜಿಲ್ಲೆಯ ಗಜೇಂದ್ರಗಡ ಸರ್ಕಾರಿ ಪ್ರೌಢ ಶಾಲೆ ನಲ್ಲಿ ವಿದ್ಯಾರ್ಥಿಗೆ ಶಾಲಾ ಶಿಕ್ಷಕನೋರ್ವ ಬಾಸುಂಡೆ ಬರುವಂತೆ ಶಿಕ್ಷಿಸಿದ ಘಟನೆ ನಡೆದಿದೆ. 10 ನೇ ತರಗತಿಯ ವಿದ್ಯಾರ್ಥಿ ಮೌನೇಶ್ ವಿಶ್ವಬ್ರಾಹ್ಮಣ ಎಂಬ ವಿದ್ಯಾರ್ಥಿಗೆ ಇಂಗ್ಲೀಷ್ ಶಿಕ್ಷಕ ಈ ರೀತಿ ಬಾರಿಸಿದ್ದಾರೆ.
ಪ್ರಾಜೆಕ್ಟ್ ವರ್ಕ್ ತೋರಿಸಲಾರದ ವಿದ್ಯಾರ್ಥಿ ಮೇಲೆ ಕುಪಿತಗೊಂಡ ಶಿಕ್ಷಕ ಎಮ್.ಎನ್ ಖಡಗದ್ ವಿದ್ಯಾರ್ಥಿಯ ಮೈತುಂಬಾ ಬಾಸುಂಡೆ ಬರುವಂತೆ ಹೊಡೆದು ಕ್ರೌರ್ಯ ಮೆರೆದಿದ್ದಾರೆ.
ಸದ್ಯ ಶಿಕ್ಷಕರ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
PublicNext
02/10/2021 12:08 pm