ಚೆನ್ನೈ: ಸದ್ಯದ ಸ್ಥಿತಿಯಲ್ಲಿ ನನಗೆ ಎಲ್ಲಿಯೂ ಸುರಕ್ಷಿತ ಎಂಬ ಭಾವನೆ ಮೂಡಿತ್ತಿಲ್ಲ ಎಂದು ಕಾಳಿ ಸಾಕ್ಷ್ಯಚಿತ್ರದ ನಿರ್ದೇಶಕಿ ಹಾಗೂ ನಟಿ ಲೀನಾ ಮಣಿಮೇಕಲೈ ಹೇಳಿದ್ದಾರೆ.
ಕಾಳಿ ದೇವಿಯ ಪಾತ್ರದಲ್ಲಿ ಸಿಗರೇಟ್ ಸೇದುತ್ತಿರುವ ದೃಶ್ಯ ವೈರಲ್ ಆಗಿತ್ತು. ಇದು ಸಾಕ್ಷ್ಯಚಿತ್ರವೊಂದರ ದೃಶ್ಯವಾಗಿದ್ದು ಲೀನಾ ಇದರ ನಿರ್ದೇಶಕಿಯಾಗಿದ್ದಾರೆ.
ಸಾಕ್ಷ್ಯಚಿತ್ರದ ಈ ದೃಶ್ಯ ವೈರಲ್ ಆಗುತ್ತಿದ್ದಂತೆ 2 ಲಕ್ಷಕ್ಕೂ ಅಧಿಕ ಆನ್‌ಲೈನ್ ಖಾತೆಗಳಿಂದ ನನಗೆ ಬೆದರಿಕೆ ಸಂದೇಶಗಳು ಬರುತ್ತಿವೆ. ಬಲಪಂಥೀಯ ಹಿಂದೂ ಸಂಘಟನೆಗಳು ಆನ್‌ಲೈನ್‌ನಲ್ಲಿ ನಡೆಸುತ್ತಿರುವ ದಾಳಿಯು ದೊಡ್ಡ ಮಟ್ಟದ ಸಾಮೂಹಿಕ ಹತ್ಯೆ ಎಂದು ನಿರ್ದೇಶಕಿ ಹೇಳಿದ್ದಾರೆ.
ಪ್ರಜಾಪ್ರಭುತ್ವದ ದೇಶ ಅತಿ ದೊಡ್ಡ ದ್ವೇಷದ ಯಂತ್ರವಾಗಿ ಹದಗೆಟ್ಟಿದೆಯೇನೋ ಎಂಬಂತೆ ಭಾಸವಾಗುತ್ತಿದೆ ಎಂದು ಕೂಡ ಲೀನಾ ಮಣಿಮೇಕಲೈ ಹೇಳಿದ್ದಾರೆ.
PublicNext
07/07/2022 06:34 pm