ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಕ್‌ ಪಾಕೆಟ್ ಆರೋಪದ ಮೇಲೆ ಬೆಂಗಾಲಿ ನಟಿ ರೂಪಾ ದತ್ತಾ ಬಂಧನ

ಕೋಲ್ಕತ್ತ: ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಬೆಂಗಾಳಿ ನಟಿ ರೂಪಾ ದತ್ತ ಅವರನ್ನು ಬಂಧಿಸಲಾಗಿದೆ. ನಿನ್ನೆ ಶನಿವಾರ (ಮಾರ್ಚ್ 12) ರಾತ್ರಿ ಈ ಘಟನೆ ನಡೆದಿದ್ದು ಕೋಲ್ಕತ್ತದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಅವರು ಪಿಕ್ ಪಾಕೆಟ್ ಮಾಡಿದ್ದಾರೆ ಎನ್ನಲಾಗಿದೆ.

ಕೋಲ್ಕತ್ತದ ಉತ್ತರ ಬಿಧಾನ್‌ನಗರ್ ಪೊಲೀಸರು ನಟಿ ರೂಪಾ ದತ್ತಾ ಅವರನ್ನು ಬಂಧಿಸಿದ್ದಾರೆ. ಮಹಿಳೆಯೊಬ್ಬರು ಹಲವಾರು ವ್ಯಾಲೆಟ್‌ಗಳನ್ನು ಕಸದ ಬುಟ್ಟಿಗೆ ಎಸೆದಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಅನುಮಾನ ಬಂದ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿದಾಗ ಈ ಪಿಕ್ ಪಾಕೆಟ್ ಜಾಡು ನಟಿ ರೂಪಾ ದತ್ತಾವರೆಗೆ ಹೋಗಿದೆ. ಪ್ರಕರಣದಲ್ಲಿ 75,000 ರೂ ನಷ್ಟು ನಗದು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ವಿಚಾರಣೆ ನಡೆಸಿದಾಗ 75,000 ರೂ. ನಗದು ಎಲ್ಲಿಂದ ಬಂತು ಎಂಬುದರ ಬಗ್ಗೆ ನಟಿ ಬಾಯ್ಬಿಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಕ್ ಪಾಕೆಟ್ ಆರೋಪಿ ನಟಿ ರೂಪಾ ದತ್ತಾ ಅವರು ಇದಕ್ಕೂ ಮುನ್ನ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಶ್ಯಪ್ ಹೆಸರಿನಲ್ಲಿ ಅಶ್ಲೀಲ ಚಾಟ್ ಮಾಡಿದ್ದರ ಸ್ಕ್ರೀನ್ ಶಾಟ್‌ಗಳನ್ನು ರೂಪಾ ದತ್ತಾ ಹರಿಬಿಟ್ಟಿದ್ದರು. ನಂತರ ನಡೆದ ಪೊಲೀಸ್ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸ್ಕ್ರೀನ್ ಶಾಟ್ ಅನುರಾಗ್ ಕಶ್ಯಪ್ ಅವರದಲ್ಲ ಎಂಬುದು ತಿಳಿದುಬಂದಿತ್ತು.

Edited By : Nagaraj Tulugeri
PublicNext

PublicNext

13/03/2022 06:12 pm

Cinque Terre

69.53 K

Cinque Terre

2