ಚಿಕ್ಕಮಗಳೂರು: ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ನೋವು ಮಾಸುವ ಮುನ್ನವೇ ಇಲ್ಲೊಬ್ಬ ಯುವಕ ಮಾನಸಿಕ ಅಸ್ವಸ್ಥನಂತೆ ಅಪ್ಪುವಿನ ಫೋಟೋವನ್ನು ಹರಿದು ಹಾಕಿದ್ದಾನೆ. ಹರಿದವನಿಗೆ ಸ್ಥಳೀಯ ಯುವಕರು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.
ಹರಿದ ಫ್ಲೆಕ್ಸನ್ನ ಅವನ ಮೇಲೆ ಹೊದ್ದು ರಸ್ತೆಯುದ್ದಕ್ಕೂ ಹೊಡೆದುಕೊಂಡು ಬಂದು ಚಿಕ್ಕಮಗಳೂರು ನಗರ ಠಾಣೆಗೆ ಒಪ್ಪಿಸಿದ್ದಾರೆ ಸ್ಥಳೀಯ ಯುವಕರು. ಇನ್ನು ಫ್ಲೆಕ್ಸ್ ಹರಿಯುತ್ತಿರುವ ವೀಡಿಯೋ ಸಿಸಿ ಕ್ಯಾಮರದಲ್ಲಿ ಲಭ್ಯವಾಗಿದೆ.
PublicNext
22/11/2021 03:47 pm