ಮುಂಬೈ: ಶಾರುಕ್ ಖಾನ್ ಪುತ್ರನ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಪ್ರಕರಣ ಈಗ ಬೇರೆ ಟ್ವಿಸ್ಟ್ ಪಡೆದುಕೊಂಡಿದೆ. ಅದು ಅಂತಿಂತ ಟ್ವಿಸ್ಟ್ ಅಲ್ಲ. 25 ಕೋಟಿ ಟ್ವಿಸ್ಟ್ ಅದು. ಏನದು ? ಇಲ್ಲಿದೆ ಆ ಡಿಟೈಲ್ಸ್.
ಆರ್ಯನ್ ಖಾನ್ ಜೈಲ್ ಅಲ್ಲಿ ಇರೋವಾಗ, ಕಿರಣ್ ಗೋಸಾವಿ ಅನ್ನೋ ವ್ಯಕ್ತಿ ಆರ್ಯನ್ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು ಗೊತ್ತೇ ಇದೆ.
ಅದು ಅಷ್ಟೇ ವೈರಲ್ ಕೂಡ ಆಗಿತ್ತು. ಆ ಕಿರಣ್ ಗೋಸಾವಿಯ ಬಾಡಿಗಾರ್ಡ ಪ್ರಭಾಕರ್ ಸೈಲ್ ಈಗ ಒಂದು ಸತ್ಯ ಬಿಚ್ಚಿಟ್ಟಿದ್ದಾನೆ. 25 ಕೋಟಿ ವಸೂಲಿಯ ಕಥೆ ಅದು.ಜೊತೆಗೆ ಎನ್.ಸಿ.ಅಧಿಕಾರಿಗಳೂ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡರು ಅಂತಲೂ ಆರೋಪಿಸಿದ್ದಾನೆ. ಹಾಗೇನೆ ಶಾರುಕ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಮತ್ತು ಕಿರಣ್ ಗೋಸಾವಿ ಭೇಟಿಯಾಗಿದ್ದರು. ನೀಲಿ ಕಲರ್ ಮರ್ಸಿಡೀಸ್ ಬೆನ್ಜ್ ಕಾರಿನಲ್ಲೂ ಬರೋಬ್ಬರಿ-15 ನಿಮಿಷ ಮಾತನಾಡಿದರು ಅಂತಲೂ ಹೇಳಿದ್ದಾನೆ. ಅಂದ್ರೆ, ಆರ್ಯನ್ ಖಾನ್ ಹೊರತಲು ಕಿರಣ್ ಗೋಸಾವಿ ಕೋಟಿ ದುಡ್ಡುಪಡೆದಿದ್ದಾರೆಯೇ? ಅನ್ನೋ ಅನುಮಾನ ಈಗಲೇ ಶುರು ಆಗಿದೆ.ಆದರೆ ಈ ಕಿರಣ್ ಗೋಸಾವಿ ಈಗ ನಾಪತ್ತೆ ಆಗಿದ್ದಾನೆ.
PublicNext
24/10/2021 07:31 pm