ಮುಂಬೈ: ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಅಧಿಕಾರಿಗಳು ಇಂದು ಏಕಾಏಕಿ ಮುಂಬೈನಲ್ಲಿನ ಬಾಲಿವುಡ್ ನಟ, ನಟಿಯರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ನಟ ಶಾರುಖ್ ಖಾನ್ ನಿವಾಸ ‘ಮನ್ನತ್’ಗೆ ತೆರಳಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಳೆದ ಅಕ್ಟೋಬರ್ 3ರಂದು ಮುಂಬೈಯ ಕಡಲ ತೀರದಲ್ಲಿ ಕ್ರೂಸ್ ಶಿಪ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ವೇಳೆ ಸಿಕ್ಕಿಬಿದ್ದು ಆರ್ಯನ್ ಖಾನ್ ಅರ್ಥೂರ್ ರೋಡ್ ಜೈಲು ಸೇರಿದ್ದಾನೆ. ಆರ್ಯನ್ ಜಾಮೀನು ಅರ್ಜಿ ವಿಚಾರಣೆ ಇದೇ 26ರಂದು ಮುಂಬೈ ಹೈಕೋರ್ಟ್ ನಲ್ಲಿ ನಡೆಯಲಿರುವುದರ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ಇನ್ನೊಂದೆಡೆ ಎನ್‌ಸಿಬಿ ತಂಡವೊಂದು ಬಾಲಿವುಡ್ ನಟ ಚಂಕಿ ಪಾಂಡೆಯವರ ಪುತ್ರಿ, ನಟಿ ಅನನ್ಯಾ ಪಾಂಡೆ ನಿವಾಸಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿ ಮಧ್ಯಾಹ್ನ ವಿಚಾರಣೆಗೆ ಬರುವಂತೆ ನಟಿಗೆ ಸಮನ್ಸ್ ನೀಡಿದ್ದಾರೆ. ನಟಿ ಅನನ್ಯಾ ಪಾಂಡೆ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸ್ನೇಹಿತೆಯಾಗಿದ್ದು, ಡ್ರಗ್ಸ್ ಗೆ ಸಂಬಂಧಿಸಿದ ವಾಟ್ಸಪ್ ಚಾಟ್ ಆರ್ಯನ್ ಖಾನ್ ಮೊಬೈಲ್ ನಲ್ಲಿ ಸಿಕ್ಕಿದೆ. ಹೀಗಾಗಿ ಫೋನ್, ಲ್ಯಾಪ್ ಟಾಪ್ ಮತ್ತು ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
PublicNext
21/10/2021 03:55 pm