ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನನ್ನ ಪ್ರೀತಿಯ ಆರ್ಯನ್': ಪತ್ರ ಬರೆದರು ಹೃತಿಕ್ ರೋಷನ್

ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸುಳಿಯಲ್ಲಿ ಸಿಲುಕಿದ್ದಾರೆ. ಈಗ ಅವರು ಪೊಲೀಸರ ಸುಪರ್ದಿಯಲ್ಲಿದ್ದಾರೆ. ಈ ವೇಳೆ ಇನ್ನೋರ್ವ ಬಾಲಿವುಡ್ ಮೇರು ನಟ ಹೃತಿಕ್ ರೋಷನ್ ಆರ್ಯನ್ ಖಾನ್‌ಗೆ ಪತ್ರ ಬರೆದಿದ್ದಾರೆ. ಆರ್ಯನ್ ಖಾನ್ ಫೋಟೋ ಸಮೇತ ಈ ಪತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿರುವ ಹೃತಿಕ್, ಮಾರ್ಗದರ್ಶಿ ಹಿತನುಡಿಗಳನ್ನು ಹೇಳಿದ್ದಾರೆ

‘ನನ್ನ ಪ್ರೀತಿಯ ಆರ್ಯನ್​ ಖಾನ್​..’ ಎಂದು ಹೃತಿಕ್​ ಈ ಪತ್ರ ಆರಂಭಿಸಿದ್ದಾರೆ. ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್​ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್​ ಮಾಡಬೇಕು. ನಿನ್ನೊಳಗಿನ ಹೀರೋನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು… ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’ ಎಂದು ಹೃತಿಕ್​ ಅವರು ಈ ಪತ್ರದಲ್ಲಿ ಬರೆದಿದ್ದಾರೆ.

‘ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಮಗು ಆಗಿದ್ದಾಗಿನಿಂದ ನಾನು ನೋಡಿದ್ದೇನೆ. ದೊಡ್ಡವನಾದ ಮೇಲೂ ನೋಡಿದ್ದೇನೆ. ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದು ಹೃತಿಕ್​ ಬರೆದಿದ್ದಾರೆ.

Edited By : Nagaraj Tulugeri
PublicNext

PublicNext

07/10/2021 04:12 pm

Cinque Terre

107.33 K

Cinque Terre

21