ರಾಮನಗರ: ನಟಿ ಸೌಜನ್ಯಾ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಸೌಜನ್ಯಾ ತಂದೆ ಪ್ರಭು ಮಾದಪ್ಪ ಅವರು ಗುರುವಾರ ರಾತ್ರಿ ಕುಂಬಳಗೋಡು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಸೌಜನ್ಯಾ ಆಪ್ತ ಸಹಾಯಕ ಹಾಗೂ ನಟನೊಬ್ಬನ ವಿರುದ್ಧ ಅವರು ಆರೋಪ ಮಾಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಮಾದಪ್ಪ ' ಮಗಳು ಕಳೆದ ಐದು ವರ್ಷದಿಂದ ಬೆಂಗಳೂರಿನಲ್ಲಿದ್ದು, ಎರಡು ವರ್ಷದಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೇ ಇದ್ದಳು. ಕೆಲ ಕಾಲ ಗಗನಸಖಿಯಾಗಿಯೂ ಕೆಲಸ ಮಾಡಿದ್ದಳು. ಚೌಕಟ್ಟು, ಫನ್, ಅರ್ಜುನ್ ಗೌಡ ಚಿತ್ರಗಳಲ್ಲಿ ಆಕೆ ನಟಿಸಿದ್ದಳು. ಬೆಳಿಗ್ಗೆಯಷ್ಟೇ ಮೊಬೈಲ್ ಕರೆ ಮಾಡಿ, ಕೊಡಗಿಗೆ ಬರುವುದಾಗಿ ಹೇಳಿದ್ದಳು. ಮಗಳು ಅಂತವಳಲ್ಲ. ಆಕೆಗೆ ಯಾರೋ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
PublicNext
01/10/2021 07:26 am