ಚಂಡೀಗಡ: ನಟಿ, ಭಾರತೀಯ ಮಾಡೆಲ್ ಅಲಂಕೃತ ಸಹೈ ಮನೆಗೆ ನುಗ್ಗಿ ದುಷ್ಕರ್ಮಿಗಳು ಚಾಕು ತೋರಿಸಿ 6 ಲಕ್ಷ ರೂ.ವನ್ನು ದರೋಡೆ ಮಾಡಿದ್ದಾರೆ.
ನಟಿ ಅಲಂಕೃತ ಸಹೈ ಅವರು ಒಂದು ತಿಂಗಳ ಹಿಂದಷ್ಟೇ ಚಂಡೀಗಡದ ಸೆಕ್ಟರ್-27ರಲ್ಲಿ ಮನೆಯನ್ನು ಬಾಡಿಗೆ ಪಡೆದಿದ್ದರು. ನಿನ್ನೆ ಮಧ್ಯಾಹ್ನ ನಟಿ ಮನೆಯಲ್ಲಿ ಒಬ್ಬರೇ ಇದ್ದಾಗ ಮೂವರು ಮುಸುಕುಧಾರಿಗಳು ಮನೆಗೆ ಪ್ರವೇಶಿಸಿದ್ದು, ಅವರಲ್ಲಿ ಒಬ್ಬ ನಟಿ ಕತ್ತಿನ ಮೇಲೆ ಚಾಕು ಇರಿಸಿದ್ದಾನೆ. ನಂತರ ಆರು ಲಕ್ಷ ರೂಪಾಯಿಗಳೊಂದಿಗೆ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ನಟಿ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
PublicNext
08/09/2021 09:45 am