ಚೆನ್ನೈ: ತಮಿಳು ನಿರ್ದೇಶಕನಿಗೆ ಜಾತಿ ನಿಂದನೆ ಆರೋಪದ ಮೇಲೆ ತಮಿಳು ನಟಿ ಮೀರಾ ಮಿಥುನ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ನಟಿ ಮೀರಾ ಮಿಥುನ್ ಆಗಸ್ಟ್ 7ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾ ಎಂದು ಆರೋಪಿಸಲಾಗಿತ್ತು. ಈ ವಿಡಿಯೋ ವೈರಲ್ ಆಗಿದ್ದು ಕೆಲವರು ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು.
ಮೀರಾ ಮಿಥುನ್ ವಿರುದ್ಧ ವಿಡುತಲೈ ಸಿರುತೈಗಳ್ ಕಾಟ್ಚಿ ಪಾರ್ಟಿಯ ಮುಖ್ಯಸ್ಥ ವನ್ನಿ ಅರಸು ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆ ಚೆನ್ನೈ ಪೊಲೀಸರು ಕೇಸ್ ದಾಖಲಿಸಿ ಇದೀಗ ನಟಿಯನ್ನ ಅರೆಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಸಿನಿಮಾ ನಿರ್ದೇಶಕರೊಬ್ಬರು ತನ್ನ ಫೋಟೋವನ್ನು ಕದ್ದು ಅದನ್ನು ಸಿನಿಮಾ ಪೋಸ್ಟರ್ಗೆ ಬಳಸಿಕೊಂಡಿದ್ದಾರೆ ಎಂದು ಮೀರಾ ಹೇಳಿದ್ದಾರೆ. ನಂತರ ನಿರ್ದೇಶಕರ ಸಮುದಾಯದ ವಿರುದ್ಧ ಕೀಳುಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ನಟಿಯ ವಿರುದ್ಧ ಐಪಿಸಿ ಸೆಕ್ಷನ್, 153, 153ಎ(1), 505(1)(ಬಿ), 505(2) ಅಡಿ ಕೇಸ್ ದಾಖಲಿಸಲಾಗಿದೆ.
PublicNext
09/08/2021 08:52 pm