ಮುಂಬೈ: ಉದ್ಯಮಿಯಷ್ಟೇ ಆಗಿದ್ದ ಯು.ಕೆ ಮೂಲದ ರಾಜ್ ಕುಂದ್ರಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ವರಿಸಿದ ನಂತರ ಖ್ಯಾತಿ ಗಳಿಸಿದರು. ತಮ್ಮ ಐಡೆಂಟಿಟಿ ಹೆಚ್ಚಿಸಿಕೊಂಡರು. ಈ ನಡುವೆ ಮದುವೆ ವಿಚಾರ ಬಂಧಾಗ ನಟಿ ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾಗೆ ಕೆಲವು ಕಂಡೀಶನ್ ಹಾಕಿದ್ರಂತೆ.
ಭಾರತದಲ್ಲಿದ್ರೆ ಮಾತ್ರ ಮದುವೆಯಾಗೋದೆನ್ನುವ ಶಿಲ್ಪಾ ಕಂಡೀಷನ್‌ಗೆ ಒಪ್ಪಿ ಮುಂಬೈನ ಜುಹುವಿನಲ್ಲಿ ಮನೆ ಖರೀದಿಸಿದ್ದರು ರಾಜ್. ಭಾರತದವರೇ ಆದ ರಾಜ್ ಕುಂದ್ರಾ ಯುಕೆಯಲ್ಲಿ ಹುಟ್ಟಿ ಬೆಳೆದಿದ್ದು ಹೇಗೆ ಎಂಬುದು ಕುತೂಹಲಕಾರಿ ವಿಚಾರ. ಅಂದ ಹಾಗೆ ರಾಜ್ ಕುಂದ್ರಾ ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದರು. ಬಡತನ, ಕಷ್ಟದ ಜೀವನ ಹೇಟ್ ಮಾಡ್ತಿದ್ದ ರಾಜ್ ಉದ್ಯಮಿಯಾಗಿ ಸಕ್ಸಸ್ ಆದರು. ಶಿಲ್ಪಾ ಅವರನ್ನು ಮದುವೆಯಾಗಬೇಕಾದರೂ ಜುಹುವಿನಲ್ಲಿ ಅಮಿತಾಭ್ ಮನೆಯ ಪಕ್ಕವೇ ಮನೆ ಕೂಡಾ ಖರೀದಿಸಿದ್ದರು ರಾಜ್. ಇದು ಶಿಲ್ಪಾ ಶೆಟ್ಟಿ ಕಂಡೀಷನ್ ಆಗಿತ್ತು ಎಂಬುದು ವಿಶೇಷ. ಯಾವುದಕ್ಕೂ ಕಮ್ಮಿ ಇಲ್ಲದ ಐಷಾರಾಮಿ ಬದುಕು ಲೀಡ್ ಮಾಡಿದ್ದ ನಟಿ ಶಿಲ್ಪಾ ಶೆಟ್ಟಿ ಈಗ ಕಾನೂನಿನ ಸುಳಿಯಲ್ಲಿ ಸಿಲುಕಿದ್ದಾರೆ.
PublicNext
30/07/2021 06:23 pm