ಬೆಂಗಳೂರು: ಅವಳು ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದನ್ನು ಗಮನಿಸಿದ್ದೆ. ಸಹಾಯವನ್ನೂ ಮಾಡಿದ್ದೆ. ಸುಮಾರು ಮೂರ್ನಾಲ್ಕು ವರ್ಷದ ಹಿಂದೆ ನಾವು ಭೇಟಿಯಾಗಿದ್ದೆವು. ಆ ನಂತರ ಭೇಟಿಯಾಗಿರಲಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿರುವ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಅವರ ಗೆಳತಿ ನಟಿ ಅಶ್ವಿತಿ ಶೆಟ್ಟಿ ಭಾವುಕರಾಗಿದ್ದಾರೆ.
ನಿಯಮಿತವಾಗಿ ಡ್ಯಾನ್ಸ್ ಮಾಡುತ್ತಿದ್ದೇನೆ, ಆರೋಗ್ಯವಾಗಿದ್ದೇನೆ ಎಂದು ನನ್ನ ಬಳಿ ಜಯಶ್ರೀ ಹೇಳಿದ್ದಳು. ಹೊಸ ಜೀವನ ಆರಂಭಿಸಿ ಸಾಧನೆ ಮಾಡಬೇಕು ಎಂದಿದ್ದಳು. ಸಮಸ್ಯೆ ಪ್ರತಿಯೊಬ್ಬರ ಜೀವನದಲ್ಲೂ ಇರುತ್ತೆ, ಅದನ್ನು ಫೇಸ್ ಮಾಡೋ ಬದಲು ಈ ರೀತಿ ನಿರ್ಧಾರ ತಪ್ಪು. ಅವಳು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಅವಳ ಮುಖ ನೋಡಲು ಅಷ್ಟು ದೂರದಿಂದ ಬಂದಿದ್ದೇನೆ, ಮಾಧ್ಯಮದವರು ಕರೆ ಮಾಡಿ ಹೇಳಿದಾಗ ನನಗೆ ನಂಬಲು ಆಗಲಿಲ್ಲ ಎಂದು ನಟಿ ಅಶ್ವಿತಿ ಶೆಟ್ಟಿ ಭಾವುಕರಾದರು.
PublicNext
25/01/2021 07:59 pm