ಬೆಂಗಳೂರು: ಮೂಲದ ಮಾಡೆಲ್ ಹಾಗೂ ನಟಿಗೆ ವಂಚನೆ ಆಗಿರುವ ಆರೋಪ ಕೇಳಿಬಂದಿದೆ. 'ಆಕಾಶ ದೀಪ' ಸೀರಿಯಲ್ ಖ್ಯಾತಿಯ ದಿವ್ಯಾ ಶ್ರೀಧರ್ಗೆ ತಮಿಳುನಾಡಿನ ಅರ್ನವ್ ಅವರಿಂದ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವತಃ ದಿವ್ಯಾ ಶ್ರೀಧರ್ ಅವರೇ ಅರ್ನವ್ ವಿರುದ್ಧ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ನನಗೆ 2017ರಲ್ಲಿ ಅರ್ನವ್ ಪರಿಚಯ. ಕಳೆದ 5 ವರ್ಷಗಳಿಂದ ಲಿವಿಂಗ್ ರಿಲೇಷನ್ನಲ್ಲಿ ಇದ್ವಿ. ನಾನು ಅರ್ನವ್ರನ್ನ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ.. ಲಾಕ್ಡೌನ್ನಲ್ಲಿ ಅರ್ನವ್ಗೆ ಯಾವುದೇ ಕೆಲಸ ಇರಲಿಲ್ಲ. ನಾನೇ ಒಂದು ಮನೆ ಖರೀದಿಸಿ ಪ್ರತಿ ತಿಂಗಳು ಹಣ ಕಟ್ಟುತ್ತಿದ್ದೆ. ನಾನೇ ಇಡೀ ಮನೆಯನ್ನ ನಿಭಾಯಿಸುತ್ತಿದ್ದೆ. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾದ ಬಳಿಕ ಮದುವೆ ಆಯಿತು..
ಈ ಎಲ್ಲಾ ಬೆಳವಣಿಗೆಗಳ ಬಳಿಕ ಮತ್ತೊಬ್ಬ ನಟಿಯ ಜತೆ ಅರ್ನವ್ಗೆ ಅಕ್ರಮ ಸಂಬಂಧ ಇರೋದು ಗೊತ್ತಾಯಿತು. ನಾನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಗರ್ಭಿನಿಯಾಗಿದ್ದರೂ ಹಲ್ಲೆ ಮಾಡಿದ್ದಾರೆ.
ಹಲ್ಲೆ ವೇಳೆ ಹೊಟ್ಟೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದೆ. ಸದ್ಯ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಯಾವಾಗ ಬೇಕಾದರೂ ಗರ್ಭಪಾತ ಆಗಬಹುದು. ಎಲ್ಲರು ದೇವರಲ್ಲಿ ಬೇಡಿಕೊಳ್ಳಿ. ನನ್ನ ಮಗುವಿಗೆ ಏನೂ ಆಗಬಾರದು ಎಂದು ಪ್ರಾರ್ಥಿಸಿ ಎಂದು ಇನ್ಸ್ಟಾದಲ್ಲಿ ವಿಡಿಯೋ ಆರೋಪಿಸಿದ್ದಾರೆ.
ಅರ್ನವ್ ಹೇಳೋದೇನು..? ಕನ್ನಡದ ಪಲ್ಲಕ್ಕಿ ಸಿನಿಮಾದಲ್ಲಿ ನಟಿ ದಿವ್ಯಾ ನಟಿಸಿದ್ದಾರೆ. ನಾನು ಎಲ್ಲವನ್ನೂ ಸಹಿಸಿಕೊಂಡು ಅವನಿಗೋಸ್ಕರ ಇದೆ. ಈಗಲೂ ಅವನನ್ನ ಬಿಟ್ಟು ಬದುಕಲು ನನಗೆ ಆಗಲ್ಲ. ನನಗೆ ಅವನು ಬೇಕು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ದಿವ್ಯಾ ಆರೋಪಕ್ಕ ಆರೋಪಿ ಅರ್ನವ್ ಪ್ರತಿಕ್ರಿಯಿಸಿದ್ದು, ದಿವ್ಯಾ ಶ್ರೀಧರ್ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ದಿವ್ಯಾ ನನ್ನನ್ನ ಮದುವೆ ಆಗುವ ಮೊದಲೇ ಮಗು ಇತ್ತು. ಅವಳಿಗೆ ಮಗು ಇರುವ ವಿಚಾರವನ್ನ ಮುಚ್ಚಿಟ್ಟಿದ್ದರು ಎಂದು ಕಿಡಿಕಾರಿದ್ದಾರೆ.
PublicNext
07/10/2022 06:59 am