ನವದೆಹಲಿ: ಪ್ರತಿಷ್ಟಿತ ಹೀರೋ ಮೋಟೊಕಾರ್ಪ್ ಕಂಪನಿಯು 1,000 ಕೋಟಿ ರೂ.ಗೂ ಹೆಚ್ಚು ಬೋಗಸ್ ಖರ್ಚು ಹಾಗೂ 100 ಕೋಟಿ ರೂ.ಗೂ ಹೆಚ್ಚು ನಗದು ವಹಿವಾಟು ನಡೆಸಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ದೆಹಲಿಯ ಛತ್ತರ್‌ಪುರದಲ್ಲಿರುವ ಫಾರ್ಮ್‌ಹೌಸ್‌ಗಾಗಿ ಕಂಪನಿಯು ಈ ವಹಿವಾಟನ್ನು ನಡೆಸಿದೆ ಎಂಬುದು ಐಟಿ ತನಿಖೆ ವೇಳೆ ಗೊತ್ತಾಗಿದೆ.
ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ತಮ್ಮ ಛತ್ತರ್‌ಪುರದಲ್ಲಿರುವ ಫಾರ್ಮ್‌ಹೌಸ್ ಖರೀದಿಗೆ 100 ಕೋಟಿ ರೂ. ಕಪ್ಪು ಹಣವನ್ನು ಪಾವತಿಸಿದ್ದಾರೆ ಎಂದು ಐಟಿ ಇಲಾಖೆ ಬಹಿರಂಗ ಪಡಿಸಿದೆ. ಇದು ಐಟಿ ಕಾಯ್ದೆಯ ಸೆಕ್ಷನ್ 269 ಎಸ್‌ಎಸ್‌ನ ಉಲ್ಲಂಘನೆಯಾಗಿದೆ.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಹಾರ್ಡ್ ಕಾಪಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿನ ನಕಲಿ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ(ಐಟಿ) ಇಲಾಖೆ ಮಾರ್ಚ್ 23 ರಂದು ಪವನ್ ಮುಂಜಾಲ್ ಅವರ ನಿವಾಸ ಹಾಗೂ ಹೀರೋ ಕಂಪನಿ ದೆಹಲಿ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ದಾಳಿಯು ಮಾರ್ಚ್ 26ರಂದು ಅಂತ್ಯವಾಗಿತ್ತು.
PublicNext
29/03/2022 09:55 pm