ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರತನ್ ಟಾಟಾ ಕಾರ್‌ ನಂಬರ್‌ ಬಳಸಿ ಸಿಕ್ಕಿಬಿದ್ದ ಮಹಿಳಾ ಉದ್ಯಮಿ

ಮುಂಬೈ: ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರ ಕಾರ್‌ ನಂಬರ್ ಪ್ಲೇಟ್ ಅನ್ನು ನಕಲು ಮಾಡಿದ ಆರೋಪದ ಮೇಲೆ ಮುಟುಬಾದ ಟ್ರಾಫಿಕ್ ಪೊಲೀಸರು ಮಾಟುಂಗಾದ ಮಹಿಳಾ ಉದ್ಯಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಪ್ರಕಾರ, ರತನ್ ಟಾಟಾ ಅವರು ಸಿಎಂ ಕಚೇರಿಯನ್ನು ಸಂಪರ್ಕಿಸಿದ ನಂತರ ತನಿಖೆ ನಡೆಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯಿಂದ ಪೊಲೀಸರಿಗೆ ಸೂಚನೆ ಬಂದಿತ್ತು. ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರು, ಇ-ಚಲನ್‌ಗಳ ಪರಿಶೀಲನೆ ನಡೆಸಿದಾಗ ಕಸ್ಟಮ್ಸ್ ಹೌಸ್ ಏಜೆಂಟ್ ಮತ್ತು ಸರಕು ಸಾಗಣೆ ಕಂಪನಿಯ ನಿರ್ದೇಶಕರಾದ ಗೀತಾಂಜಲ್ಲಿ ಸಮೀರ್ ಶಾ ಅವರು ರತನ್ ಟಾಟಾ ಕಾರಿನ ನಂಬರ್‌ ಬಳಸಿರುವುದು ತಿಳಿದು ಬಂದಿದೆ.

ಗೀತಾಂಜಲಿ ಅವರ ಬಿಎಂಡಬ್ಲ್ಯು ಕಾರಿನ ಸಂಖ್ಯೆ 1110 ಆಗಿದ್ದರೆ, ಅವರು ಶೂನ್ಯವನ್ನು ಕೈಬಿಟ್ಟು 111 ಎಂದು ಅಷ್ಟೇ ಕಾರಿನ ಮೇಲೆ ಬರೆಸಿದ್ದಾರೆ. ಹೀಗಾಗಿ ಗೀತಾಂಜಲಿ ಅವರಿಂದಾದ ಸಂಚಾರ ನಿಯಮ ಉಲ್ಲಂಘನೆಗೆ ರತನ್‌ ಟಾಟಾ ಅವರಿಗೆ ದಂಡದ ಇ-ಚನಲ್ ನೀಡಲಾಗಿತ್ತು.

Edited By : Vijay Kumar
PublicNext

PublicNext

06/01/2021 11:48 am

Cinque Terre

102.38 K

Cinque Terre

0