ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Redmi 6A ಮೊಬೈಲ್ ಸ್ಫೋಟ : ಮಹಿಳೆ ಸಾವು

ಪ್ರಸ್ತುತ ಬದುಕಿನಲ್ಲಿ ಮೊಬೈಲ್ ಇಲ್ಲದೆ ಬದುಕುವುದು ಅಸಾಧ್ಯ ಎನ್ನುವಂತಾಗಿದೆ. ಆದ್ರೆ ಮೊಬೈಲ್ ಬಳಕೆ ತುಸು ಕಡಿಮೆ ಮಾಡಿದ್ರೆ ಒಳಿತು ಎನ್ನಬಹುದು. ಸದ್ಯ Redmi 6A ಸ್ಮಾರ್ಟ್ ಫೋನ್ ಸ್ಫೋಟಗೊಂಡು ಮಹಿಳೆ ಸಾವನ್ನಪ್ಪಿರುವ ಘಟನೆ ದೆಹಲಿಯ ಎನ್ ಸಿಆರ್ ಬಳಿ ನಡೆದಿದೆ.

ಯುಟ್ಯೂಬರ್ ಮಂಜಿತ್ ಎಂಬುವವರು ಮೊಬೈಲ್ ಸ್ಫೋಟದಿಂದ ನನ್ನ ಚಿಕ್ಕಮ್ಮ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಡ್ ರೂಮ್ ನಲ್ಲಿ ಮಲಗಿದ್ದ ಚಿಕ್ಕಮ್ಮ, ಪಿಲ್ಲೋ ಮೇಲೆ ಕೈಇಟ್ಟು ಮೊಬೈಲ್ ನೋಡುತ್ತಿದ್ದರು. ಈ ವೇಳೆ ಫೋನಿನ ಬ್ಯಾಟರಿ ಬ್ಲಾಸ್ಟ್ ಆಗಿದೆ. ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಮಂಜಿತ್, ಸ್ಫೋಟಗೊಂಡಿರುವ ಮೊಬೈಲ್ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : Nirmala Aralikatti
PublicNext

PublicNext

12/09/2022 07:55 am

Cinque Terre

119.09 K

Cinque Terre

9