ಬ್ಯಾಂಕಾಕ್: ಥೈಲ್ಯಾಂಡ್ ಮಹಾರಾಜ ವಾಜಿರಲಾಂಗ್ ಕಾರ್ನ್ ಪತ್ನಿ ಸಿನೀನಾತ್ ವೊಂಗ್ವಾಜಿರಾಪಕ್ಡಿಯ ಅಶ್ಲೀಲ ಫೋಟೊಗಳನ್ನು ಡೈಲಿ ಮೇಲ್ ಆನ್ಲೈನ್ ನ್ಯೂಸ್ ವೆಬ್ಸೈಟ್ ನಲ್ಲಿ ಶೇರ್ ಮಾಡಲಾಗಿದೆ.
ಥೈಲ್ಯಾಂಡ್ ಕಾರ್ಯಕರ್ತನೊಬ್ಬ ಕೆಲ ಫೋಟೋಗಳನ್ನು ಶೇರ್ ಮಾಡಿ ಮಾಹಿತಿ ಹರಿಬಿಟ್ಟಿದ್ದಾನೆ. ಇದು ರಾಜದಂಪತಿಯ ನಡುವೆ ಅಸಮಾಧಾನಕ್ಕೆ ಕಾರಣವಾಗಿದೆ. ರಾಜನ ಪತ್ನಿಯ ಒಟ್ಟು 1400 ಫೋಟೋಗಳು ಲೀಕ್ ಆಗಿವೆ. ಇದರಲ್ಲಿ ನೂರಾರು ಚಿತ್ರಗಳು ಅಶ್ಲೀಲ ಭಂಗಿಯಲ್ಲಿವೆ ಎನ್ನಲಾಗಿದೆ. 2012ರಿಂದ 2014ರ ವೇಳೆಯಲ್ಲಿ ತೆಗೆಯಲಾಗಿರುವ ಈ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿವೆ.
ಈಗಾಗಲೇ ಜೈಲು ಶಿಕ್ಷೆ ಅನುಭವಿಸಿ ಪುನಃ ರಾಜಾಶ್ರಯಕ್ಕೆ ಬಂದಿರುವ ಸಿನೀನಾತ್ ಅವರ ನಗ್ನ ಚಿತ್ರಗಳು ರಾಜವಿರೋಧಿಗಳ ಕೈಗೆ ಸಿಕ್ಕಿದೆ. ಸಿನೀನಾತ್ ಜೈಲಿನಲ್ಲಿದ್ದಾಗ ಆಕೆಯ ಫೋನ್ ಹ್ಯಾಕ್ ಮಾಡಿ ಈ ಫೋಟೊಗಳನ್ನು ತೆಗೆಯಲಾಗಿತ್ತು ಎಂಬ ಮಾಹಿತಿ ಇದೆ.
PublicNext
24/12/2020 11:24 am